ಮುಳ್ಳೇರಿಯ: ಅಯೋಧ್ಯೆ ಶ್ರೀರಾಮ ಜನ್ಮಭೂಮಿ ನಿಧಿ ಸಮರ್ಪಣಾ ಅಭಿಯಾನದ ಚಾಲನೆಯನ್ನು ಗಾಡಿಗುಡ್ಡೆ ಶ್ರೀ ಭಾರತಾಂಬಾ ಭಜನಾ ಮಂದಿರದಲ್ಲಿ ಧಾರ್ಮಿಕ ರಾಜಕೀಯ ಮುಂದಾಳು ಎಂ ಸಂಜೀವ ಶೆಟ್ಟಿ ಮೊಟ್ಟೆಕುಂಜ ರವರು ಶುಕ್ರವಾರ ನೆರವೇರಿಸಿದರು. ಅಭಿಯಾನದ ಕುಂಬ್ಡಾಜೆ ಪಂಚಾಯತು ಸಮಿತಿ ಸಂಚಾಲಕ ರಾಜೇಶ್ ಶೆಟ್ಟಿ, 1992 ರ ಕರಸೇವೆಯಲ್ಲಿ ಭಾಗವಹಿಸಿದ ಅಚ್ಚುತ ಮಣಿಯಾಣಿ ಗುತ್ತುಹಿತ್ಲು,ಅಭಿಯಾನದ ಗಾಡಿಗುಡ್ಡೆ ಸಮಿತಿಯ ಸಂಚಾಲಕ ದಯಾನಂದ ರೈ ಮೊದಲಾದವರು ಉಪಸ್ಥಿತರಿದ್ದರು.