ಕಾಸರಗೋಡು: ಜಿಲ್ಲೆಯ ದುರ್ಬಲ ವಿಭಾಗದ ವಿದ್ಯಾರ್ಥಿಗಳು ಹಾಗೂ ಅವರ ಹೆತ್ತವರಿಗಾಗಿ ಜಿಲ್ಲಾ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಆರಂಭಿಸಲಾದ ಅಧ್ಯಯನ ತರಗತಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಚಾಲನೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿರ್ದೇಶದನ್ವಯ ಜನ ಮೈತ್ರಿ ಪೊಲೀಸ್ ಸಹಕಾರದೊಂದಿಗೆ ತರಗತಿ ಆಯೋಜಿಸಲಾಗಿದೆ.
ಕೋವಿಡ್ ಮಾನದಂಡಗಳೊಂದಿಗೆ ಆರಂಭಿಸಲಾದ ತರಗತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಉದ್ಘಾಟಿಸಿದರು. ಡಿಸಿಆರ್‍ಬಿ ಡಿವೈಎಸ್‍ಪಿ ಜೈಸನ್ ಕೆ.ಅಬ್ರಹಾಂ ಅಧ್ಯಕ್ಷತೆ ವಹಿಸಿದ್ದರು. ಸೈಕೋ ಸೋಶಿಯಲ್ ಶಾಲಾ ಕೌನ್ಸೆಲರ್‍ಗಳಾದ ನೆಸ್ಸಿ ಮ್ಯಾಥ್ಯೂ, ಲೈಲಾ, ವನಿತಾಸೆಲ್ ಫ್ಯಾಮಿಲಿ ಕೌನ್ಸೆಲರ್ ರಮ್ಯಾ ಶ್ರೀನಿವಾಸನ್ ತರಗತಿ ಮತ್ತು ಆಪ್ತ ಸಮಾಲೋಚನೆ ನಡೆಸಿದರು.