ಕಾಸರಗೋಡು: ರಾಷ್ಟ್ರೀಯ ಯುವಜನ ದಿನಾಚರಣೆ ಅಂಗವಾಗಿ ಕೇರಳ ರಾಜ್ಯ ಯುವಜನ ಕಲ್ಯಾಣ ಮಂಡಳಿ ಜಿಲ್ಲಾ ಯುವಜನ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ ನಡೆಸಲಿದೆ. "ವಿವೇಕಾನಂದ ದರ್ಶನಗಳ ಸಮಾಕಾಲಿಕ ಮಹತ್ವ" ಎಂಬ ವಿಷಯದಲ್ಲಿ 18ರಿಂದ 40 ವರ್ಷ ಪ್ರಾಯದ ನಡುವಿನ ವಯೋಮಾನದ ಮಂದಿ ಭಾಗವಹಿಸುವ ಸ್ಪರ್ಧೆ ಇರುವುದು. ಜ.8ರ ಮುಂಚಿತವಾಗಿ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಜನನ ದಿನಾಂಕ ಸಹಿತ ಮಾಹಿತಿಗಳನ್ನು 952646111 ಎಂಬ ವಾಟ್ಸ್ ಆಪ್ ನಂಬ್ರಕ್ಕೆ ಕಳುಹಿಸಿ ನೋಂದಣಿ ನಡೆಸಬೇಕು. ಮಾಹಿತಿಗೆ ದೂರವಾಣಿ ಸಂಖ್ಯೆ: 04994-256219, 9526461111.