HEALTH TIPS

'ಪಾಸಿಟಿವ್' ಪದಕ್ಕೆ ದೇಶವೇ ಭಯಪಡಲು ಪ್ರಾರಂಭಿಸಿ ಇಂದಿಗೆ ಒಂದು ವರ್ಷ- ದೇಶದ ಮೊದಲ ಕೋವಿಡ್ ಪ್ರಕರಣ ಕೇರಳದಲ್ಲಿ ವರದಿಯಾದ ದಿನ ಇಂದು!


        ತ್ರಿಶೂರ್: ದೇಶದ ಮೊದಲ ಕೋವಿಡ್ ಪ್ರಕರಣ ಕೇರಳದಲ್ಲಿ 2020ರ ಜನವರಿ 30 ರಂದು ವರದಿಯಾಗಿದ್ದನ್ನು ಬಹುತೇಕರು ಮರೆತಿರಬಹುದು. ಅಂದಿನಿಂದ ರಾಜ್ಯ ಆರೋಗ್ಯ ಇಲಾಖೆ ಕೋವಿಡ್ ನಿಯಂತ್ರಣದಲ್ಲಿ ಇನ್ನಿಲ್ಲದಂತೆ ಹೆಣಗಾಡುತ್ತಿದೆ.
       ದೇಶದಲ್ಲಿ ಕೋವಿಡ್ ಸೋಂಕಿನ ಮೊದಲ ವರದಿ ಪ್ರಕಟಗೊಳ್ಳುವುದರೊಂದಿಗೆ, ಎಲ್ಲರ ಗಮನವು ತ್ರಿಶೂರ್‌ನತ್ತ ಕೇಂದ್ರೀಕೃತವಾಗಿತ್ತು. ರಾಜ್ಯದ ಎಲ್ಲಾ ವ್ಯವಸ್ಥೆಗಳು ಎಚ್ಚರಗೊಂಡು ಹೊಸ ಪರಿಸ್ಥಿತಿಯನ್ನು ಸ್ವೀಕರಿಸಲು ಮೊದಲಿಗೆ ಯಾವೊಂದು ಅಂದಾಜಿಯೂ ಇಲ್ಲದೆ ಧುಮುಕಿದವು.  ಆರಂಭದಲ್ಲಿ ಎಲ್ಲವೂ  ನಿಯಂತ್ರಣದಲ್ಲಿದ್ದವು. ಆರೋಗ್ಯ ಸಚಿವೆ ಕೆ.ಕೆ.ಶೈಲಜಾ  ಸೇರಿದಂತೆ ನಾಲ್ವರು ಸಚಿವರು ತಡರಾತ್ರಿ ತ್ರಿಶೂರ್‌ನಲ್ಲಿ ಬೀಡುಬಿಟ್ಟಿದ್ದರು.
        ಚೀನಾದ ವುಹಾನ್ ನಿಂದ ಆಗಮಿಸಿದ್ದ ಕೋವಿಡ್ ಬಾಧಿತ  ವಿದ್ಯಾರ್ಥಿಗೆ ತ್ರಿಶೂರ್ ಜನರಲ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಚಿಕಿತ್ಸೆ ನೀಡಲಾಯಿತು. ಬಳಿಕದ ಘಟನಾವಳಿಗಳೆಲ್ಲ ಸಮರೋಪಾದಿಯ ಏಳು ಬೀಳುಗಳೊಂದಿಗೆ ಸಾಗಿಬಂದದ್ದು ನಮಗೆ ಗೊತ್ತೇಯಿದೆ.
      ಆದರೆ ಇದೀಗ ರಾಷ್ಟ್ರದಲ್ಲೇ ಅತೀ ಹೆಚ್ಚು ಸೋಂಕಿತರು ಕೇರಳದಲ್ಲಿರುವುದು ಎಲ್ಲಿಗೆ ತಲಪಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಅನಿಯಂತ್ರಿತ ಸೋಂಕು ವ್ಯಾಪಕತೆಯನ್ನು ಮಟ್ಟಹಾಕಲು ಫೆ.9 ರ ವರೆಗೂ ಮತ್ತೆ ಕಾನೂನುಗಳನ್ನು ಬಿಗಿಗೊಳಿಸಲಾಗಿದೆ. ಸರಿಸುಮಾರು ಒಂದು ವರ್ಷದಿಂದಲೂ ನಮ್ಮ ಬೆನ್ನುಬಿದ್ದಿರುವ ಕಣ್ಣಿಗೆ ಕಾಣಿಸದ ಅತಿಸೂಕ್ಷ್ಮ ವೈರಸ್ ಮಾನವ ಕುಲಕೋಟಿಗೆ ಎಂದು ನೆಮ್ಮದಿ ನೀಡುವುದೋ ಎಂಬ ಚಿಂತೆಯೊಂದಿಗೆ ನಾವು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮ, ಜೀವನ ಪದ್ದತಿಯ ಬಗ್ಗೆ ಆಳವಾದ ಧ್ಯಾನಸ್ಥ ಸ್ಥಿತಿಯ ಚಿಂತನೆಗೆ ಒಳಪಡಬೇಕು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries