ತಿರುವನಂತಪುರ: ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳಿಗೆ ಶನಿವಾರ ನೀಡಲಾಗಿದ್ದ ರಜೆಯನ್ನು ಹಿಂತೆಗೆಯಲಾಗಿದ್ದು, ರಾಜ್ಯದಲ್ಲಿ ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣೆಯನ್ನು ಈ ಹಿಂದಿನಂತೆ ಮುನ್ನಡೆಸಲು ಸರ್ಕಾರ ನಿರ್ಧರಿಸಿದೆ. ಈ ಶನಿವಾರದಿಂದ ಮೊದಲ್ಗೊಂಡು ಇನ್ನು ಎಲ್ಲಾ ಶನಿವಾರವೂ ಪೂರ್ಣ ಪ್ರಮಾಣದ ಕಾರ್ಯನಿರ್ವಹಣಾ ದಿನವಾಗಿರಲಿದೆ ಎಂದು ಸರ್ಕಾರ ಹೇಳಿದೆ.