ಮುಳ್ಳೇರಿಯ: ತಂದೆ ತಾಯಿಯನ್ನು ಗುಂಡಿಟ್ಟು ಕೊಲ್ಲುವುದನ್ನು ಸ್ವತಃ ಕಂಡು ಭಯಬೀತನಾಗಿ ಮನೆಯಿಂದ ಓಡಿ ನೆರೆಯವರಿಗೆ ವಿಷಯ ತಿಳಿಸಿದ್ದು ಆರರ ಹರೆಯದ ಬಾಲಕ. ನೆರೆಹೊರೆಯ ಇಬ್ಬರು ಮಹಿಳೆಯರು ಬಂದಾಗ ಮಗು ಮನೆಯೊಳಗೆ ರಕ್ತದ ಮಡುವಲ್ಲಿ ಮಲಗಿದ್ದ ಬಾಲಕನ ತಾಯಿಯನ್ನು ಮಂಡರೂ ಹೆಚ್ಚುಹೊತ್ತು ಅಲ್ಲಿರಲು ಬಂದೂಕುಧಾರಿಯಾದ ಬಾಲಕನ ತಂದೆ ಬಿಡದೆ ಬೆದರಿಸಿರುವುದು ಇದೀಗ ತಿಳಿದುಬಂದಿದೆ.
ಕಾನತ್ತೂರಿನಲ್ಲಿ ಪತ್ನಿಯ ಬಗ್ಗೆ ಸಂಶಯಗೊಂಡು ವಿಜಯನ್ ಬಂದೂಕಿನಿಂದ ಗುಂಡು ಹಾರಿಸಿ ಕೊಲೆಗೈದು ಬಳಿಕ ಆತ್ಮಹತ್ಯೆಗೈದ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾದ ದಂಪತಿಗಳ ಆರರ ಹರೆಯದ ಪುತ್ರನ ಮನೋಸ್ಥಿತಿ ಇದೀಗ ತೀವ್ರ ಸ್ಥಿತಿಯಲ್ಲಿದ್ದು, ಘಟನೆಯ ಬಗ್ಗೆ ಪುಟಾಣಿಯ ಮನಃಪಟಲದ ಕದಡುವಿಕೆ ಎಂತವರನ್ನೂ ಕಣ್ಣು ಮಂಜಾಗಿಸುತ್ತದೆ. ವಿಷಯವನ್ನು ಹೊರಗೆ ತಿಳಿಸಿದರೆ ತನ್ನನ್ನೂ ಬಂದೂಕಿಂದ ಉಡಾಯಿಸುವುದಾಗಿ ತಂದೆ ಬೆದರಿಸಿರುವ ಬಗ್ಗೆ ಬಾಲಕ ಭೀತನಾಗಿ ನೆನಪಿಸುತ್ತಾನೆ. ಜೊತೆಗೆ ವಿಜಯನ್ ಬಂದೂಕಿನೊಂದಿಗೆ ನಿಂತಿದ್ದರಿಂದ ಅತ್ತ ಸುಳಿಯಲೂ ಇಲ್ಲ.
ವಿಜಯನ್ ಎಷ್ಟೊಂದು ಭ್ರಾಂತನಾಗಿದ್ದನೆಂದರೆ ಪತ್ನಿಯನ್ನು ಕೊಲೆಗೈದು ಸ್ಥಳೀಯ ಪೆÇಲೀಸರನ್ನು ಕರೆದು ಸ್ವತಃ ತನ್ನ ಹೆಂಡತಿಯನ್ನು ಕೊಲ್ಲಲಾಗಿದೆ ಎಂದು ತಿಳಿಸಿದ್ದಾನೆ ಎಂದು ಅಡೂರು ಪೋಲೀಸರು ತಿಳಿಸಿದ್ದಾರೆ. ಪೋಲೀಸರು ತಲಪುವಷ್ಟರಲ್ಲಿ ವಿಜಯನ್ ದೂರದ ರಬ್ಬರ್ ತೋಟದಲ್ಲಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದನು.
ಪೋನ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ವಿಜಯನ್ ನಿನ್ನೆ ಅಡೂರು ಪೋಲೀಸರಿಗೆ ದೂರು ನೀಡಿದ್ದನೆಂಬ ಅಂಶವೂ ಬೆಳಕಿಗೆ ಬಂದಿದೆ. ಈ ಬಗ್ಗೆ ಪತಿ-ಪತ್ನಿಯರಲ್ಲಿ ವಿವಾದ ಉಂಟಾಯಿತು ಎನ್ನಲಾಗಿದೆ.
ಇದು ಕೊಲೆ ಮತ್ತು ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಪೆÇಲೀಸರು ಶಂಕಿಸಿದ್ದಾರೆ. ಕೂಲಿಕಾರ್ಮಿಕನಾದ ವಿಜಯನ್, ಕಾನತ್ತೂರು ಕೋಲಿ ಬಳಿಯ ದಿ. ಚೋಮ ಮತ್ತು ಚೋಮಾರು ಅವರ ಪುತ್ರ. ಭಾರ್ಗವಿ, ಪುಷ್ಪಾ, ಸರಸ್ವತಿ, ಸುಜಾತಾ ಮತ್ತು ದಿ. ಚಂದ್ರನ್ ಸಹೋದರ ಸಹೋದರಿಯರು. ವಿಜಯನ್ ರ ಪತ್ನಿ ಬೇಬಿ ಶಾಲಿನಿ ಕುಂಡಂಗುಳಿಯ ಕುವರದ ರಾಜು ಮತ್ತು ಕಾತ್ರ್ಯಾಯಿನಿ ದಂಪತಿಗಳ ಪುತ್ರಿ. ಒಡಹುಟ್ಟಿದವರು: ಕೆ ಸತೀಶನ್, ನಾರಾಯಣಿ ಮತ್ತು ಸುಜಾತಾ.