ನವದೆಹಲಿ: ಸೇರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್‍ನ ಲಸಿಕೆಗಳಾದ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಗಳಿಗೆ ತುರ್ತು ಪರಿಸ್ಥಿತಿಯಲ್ಲಿ ನಿಬರ್ಂಧಿತ ಬಳಕೆಗೆ ಅನುಮತಿ ನೀಡಲಾಗಿದೆ ಎಂದು ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯ (ಡಿಸಿಜಿಐ) ಹೇಳಿದೆ.
ದೆಹಲಿಯಲ್ಲಿ ಡಿಸಿಜಿಐ ಅಧ್ಯಕ್ಷ ಸಿ.ಜಿ.ಸೋಮಾನಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಪ್ರಕಟಣೆ ನೀಡೀದ್ದಾರೆ.
ತಜ್ಞರ ಸಮಿತಿ ಎರಡು ಕೊರೊನಾ ಲಸಿಕೆ ಬಗ್ಗೆ ಹೇಳಿದ್ದು ಕೋವ್ಯಾಕ್ಸೀನ್ ಹಾಗೂ ಕೋವಿಶೀಲ್ಡ್ ಆ ಎರಡು ಲಸಿಕೆಗಳಾಗಿವೆ.ಇವುಗಳನ್ನು ತುರ್ತು ಸಮಯದಲ್ಲಿ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ.ಇದೀಗ ಡಿಸಿಜಿಐ ಅನುಮತಿ ಸಿಕ್ಕ ಲಸಿಕೆಗಳನ್ನು ಉತ್ಪಾದಿಸಲು ಮಾರ್ಕೆಟಿಂಗಾಥರೈಸೇಷನ್ ಸಂಸ್ಥೆಗಳು ಅನುಮತಿ ಕೋರಲಿವೆ. ಒಮ್ಮೆ ಅವುಗಳಿಗೆ ಅನುಮತಿ ಸಿಕ್ಕ ನಂತರ ಲಸಿಕೆ ಮಾರುಕಟ್ಟೆಗೆ ಲಗ್ಗೆ ಇಡಲಿವೆ.
ಪ್ರಧಾನಿ ನರೇಂದ್ರ ಮೋದಿ"ಸೇರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್‍ನ ಲಸಿಕೆಗಳಿಗೆ ಡಿಸಿಜಿಐ ಅನುಮೋದನೆ ನೀಡುತ್ತಿರುವುದು ಆರೋಗ್ಯಕರ ಮತ್ತು ಕೋವಿಡ್ ಮುಕ್ತ ರಾಷ್ಟ್ರದತ್ತ ನಮ್ಮ ಪ್ರಯಣವನ್ನು ವೇಗಗೊಳಿಸಲಿದೆ, ನಮ್ಮ ಶ್ರಮಶೀಲ ವಿಜ್ಞಾನಿಗಳಿಗೆ ಅವರ ಹೊಸತನದ ಸಂಶೋಧನೆಗೆ ನಾನು ಅಭಿನಂದಿಸುತ್ತೇನೆ" ಎಂದಿದ್ದಾರೆ.