ಉಪ್ಪಳ: ಚಿಪ್ಪಾರು ಅಮ್ಮೇರಿಯ ಶ್ರೀಬ್ರಹ್ಮ ಬೈದರ್ಕಳ ಗರಡಿಯಲ್ಲಿ ವಾರ್ಷಿಕ ಜಾತ್ರೆ ಇಂದು(ಜ.27) ವಿವಿಧ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ನಡೆಯಲಿದೆ.
ಬೆಳಿಗ್ಗೆ 6.30ಕ್ಕೆ ಗಣಹೋಮ, 8ರಿಂದ ಶ್ರೀಸತ್ಯನಾರಾಯಣ ದೇವರ ಪೂಜೆ, 10ಕ್ಕೆ ಶ್ರೀಬ್ರಹ್ಮ ದೇವರ ಹಾಗೂ ಕೊಡಮಂತಾಯ ದೈವದ ಭಂಡಾರ ಏರುವುದು, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ಅಪರಾಹ್ನ 2.30ಕ್ಕೆ ಶುದ್ದ ಹೋಮ, ಕಲಶ, 3 ರಿಂದ ಶ್ರೀಕೊಡಮಂತಾಯ ದೈವದ ನೇಮ, ಸಂಜೆ 7 ರಿಂದ ಶ್ರೀಬ್ರಹ್ಮಬಲಿ, ಬೈದರ್ಕಳ ನೇಮೋತ್ಸವ ಮತ್ತು ಮಾಯಾಂದಾಲ ದೇವಿಯ ದರ್ಶನ, ಬೈದರ್ಕಳ ಗರಡಿ ಇಳಿಯುವುದು, ರಾತ್ರಿ 8 ರಿಂದ ಅನ್ನ ಸಂತರ್ಪಣೆ, 9ಕ್ಕೆ ಸುರಿಯ ಒಪ್ಪಿಸುವುದು, ರಾತ್ರಿ 10 ರಿಂದ ಮಾಯಾಂದಾಲ ದೇವಿಯ ದರ್ಶನ, 12.30ಕ್ಕೆ ಶ್ರೀಬೈದರ್ಕಳ ಸುರಿಯ ನಡೆಯಲಿದೆ. ನಾಳೆ(ಜ.28) ಬೆಳಿಗ್ಗೆ 10ಕ್ಕೆ ಶ್ರೀದೈವಗಳಿಗೆ ತಂಬಿಲ ಸೇವೆ ನಡೆಯಲಿದೆ.