ಕಾಸರಗೋಡು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪರಿಷ್ಕøತ ಮತದಾರರ ಪಟ್ಟಿ ಪ್ರಕಟಗೊಂಡಿದ್ದು, ಈ ಬಾರಿ ಕಾಸರಗೋಡು ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಗಿಂತ 46142ಮತಗಳ ಸಂಖ್ಯೆ ಹೆಚ್ಚಳಗೊಂಡಿದೆ. ಕಾಸರಗೋಡು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1036655ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಐದು ವಿಧಾನಸಭಾ ಕ್ಷೇತ್ರಗಳಲ್ಲಿ ತೃಕ್ಕರಿಪುರ ಕ್ಷೇತ್ರದಲ್ಲಿ ಅತ್ಯಧಿಕ ಮತದಾರರಿದ್ದಾರೆ. ಐದು ವರ್ಷದಲ್ಲಿ ಇಲ್ಲಿ 10159ಮಂದಿ ಮತದಾರರ ಸಂಖ್ಯೆ ಹೆಚ್ಚಳಗೊಂಡಿದೆ. ಕಳೆದಬಾರಿ 189246ಮಂದಿ ಇದ್ದ ಮತದಾರರ ಸಂಖ್ಯೆ ಈ ಬಾರಿ 199396ಕ್ಕೇರಿದೆ.
ಮಂಜೇಶ್ವರ ಮಂಡಲದಲ್ಲಿ 8994ಮಂದಿ ಮತದಾರರು ಹೆಚ್ಚಳಗೊಂಡಿದ್ದು, 2019ರಲ್ಲಿ ನಡೆದ ಉಪ ಚುನಾವಣೆಯ ನಂತರದ ದಿನಗಳಲ್ಲಿ ಇಲ್ಲಿ 2360ಮತದಾರರ ಸಂಖ್ಯೆ ಹೆಚ್ಚಳಗೊಂಡಿದೆ.2016ರಲ್ಲಿ ಮಂಜೇಶ್ವರದಲ್ಲಿ 208145 ಮತದಾರರಿದ್ದು, ಇದು 2019ರ ವೇಳೆಗೆ 214779 ಆಗಿ ಹೆಚ್ಚಳಗೊಂಡಿದ್ದು, 2021ರ ವೇಳೆಗೆ 217139ಕ್ಕೆರಿದೆ. ಕಾಸರಗೋಡು ಕ್ಷೇತ್ರದಲ್ಲಿ 7897ಮತಗಳ ಹೆಚ್ಚಳಗೊಂಡಿದ್ದು, 196745ಕ್ಕೇರಿದೆ. 2016ರ ಚುನಾವಣೆಯಲ್ಲಿ 188848ಮಂದಿ ಮತದಾರರಿದ್ದರು.
ಕಾಞಂಗಾಡು ಕ್ಷೇತ್ರದಲ್ಲಿ 10079ಮತಗಳ ಹೆಚ್ಚಳವಾದ್ದು, ಈ ಬಾರಿ 214524ಕ್ಕೇರಿದೆ. ಕಳೆದಬಾರಿ ಇಲ್ಲಿ 204445ಮಂದಿ ಮತದಾರರಿದ್ದರು. ಉದುಮ ಕ್ಷೇತ್ರದಲ್ಲಿ 9022ಮತಗಳ ಹೆಚ್ಚಳವಾಗಿದ್ದು, ಒಟ್ಟು ಮತದಾರರ ಸಂಖ್ಯೆ 208851ಕ್ಕೇರಿದೆ. ಕಳೆದ ಬಾರಿ ಈ ಸಂಖ್ಯೆ 199829ಆಗಿತ್ತು.
ವಿಧಾನಸಭಾ ಕ್ಷೇತ್ರ 2016ರ ಮತದಾರರ ಸಂಖ್ಯೆ 2021ರ ಮತದಾರರ ಸಂಖ್ಯೆ
-------------------------------------------------------------
1. ಮಂಜೇಶ್ವರ 208145 217139
2. ಕಾಸರಗೋಡು 188848 196745
3.ಉದುಮ 199829 208851
4.ಕಾಞಂಗಾಡು 204445 214524
5. ತೃಕ್ಕರಿಪುರ 189246 199396