ಕಾಸರಗೋಡು: 2021-22 ವರ್ಷದ ತತ್ಸಮಾನ ಕಲಿಕೆ ಆನ್ ಲೈನ್ ನೋಂದಣಿ ಜಿಲ್ಲಾ ಮಟ್ಟದ ಉದ್ಘಾಟನೆ ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಉಪಾಧ್ಯಕ್ಷ ಷಾನವಾಝ್ ಪಾದೂರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪಿ.ನಂದಕುಮಾರ್ ಜಿಲ್ಲಾ ಪಂಚಾಯತ್ ಪದಾಧಿಕಾರಿಗಳನ್ನು, ಕೋವಿಡ್ ಅವಧಿಯಲ್ಲಿ ಅತ್ಯುತ್ತಮ ಚಟುವಟಿಕೆ ನಡೆಸಿದ ಪರಪ್ಪ ಬ್ಲೋಕ್ ನೋಡೆಲ್ ಪ್ರೇರಕ್ ಅನಿಲ್ ಕುಮಾರ್ ಅವರನ್ನು ಅಭಿನಂದಿಸಿದರು. ಕೆ.ವಿ.ರಾಘವನ್ ಪ್ರಧಾನ ಭಾಷಣ ಮಾಡಿದರು. ಜಿಲ್ಲಾ ಸಂಚಾಲಕ ಟಿ.ವಿ.ಶ್ರೀಜಿತ್ ಸ್ವಾಗತಿಸಿದರು. ಅನಿಲ್ ಕುಮಾರ್ ವಂದಿಸಿದರು.
ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲೂ ಹತ್ತನೇ ತರಗತಿ, ಹೈಯರ್ ಸೆಕೆಂಡರಿ ತರಗತಿಗಳನ್ನು ಆರಂಭಿಸಲು ನಿರ್ಧರಿಸಲಾಯಿತು. ಹತ್ತನೇ ತರಗತಿಗೆ ಸದೇರ್ಪಡೆಗೊಳ್ಳಲು 7 ನೇ ತರಗತಿ, ಹೈಯರ್ ಸೆಕೆಂಡರಿ ತರಗತಿಗೆ ಸೇರ್ಪಡೆಗೊಳ್ಳಲು ಹತ್ತನೇ ತರಗತಿ ತೇರ್ಗಡೆಗೊಂಡಿರಬೇಕು. ಸಂಪರ್ಕ ಕಲಿಕಾ ತರಗತಿಗಳು ಭಾನುವಾರಗಳಲ್ಲಿ ಮತ್ತು ರಜಾ ದಿನಗಳಲ್ಲಿ ನಡೆಯಲಿವೆ.