ಕಾಸರಗೋಡು: ಕೋವಿಡ್ ವಾಕ್ಸಿನೇಷನ್ ವಿತರಣೆಯ ಕೊನೆಯ ಹಂತದ ಸಿದ್ಧತೆ ಅವಲೋಕನ ನಡೆಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಇಂದು (ಜ.8)ಡ್ರೈ ರನ್ ನಡೆಯಲಿದೆ.
ಪ್ರತಿರೋಧ ಚುಚ್ಚುಮದ್ದು ನೀಡಿಕೆ ಹೊರತುಪಡಿಸಿ ವಾಕ್ಸಿನೇಷನ್ ನ ಎಲ್ಲ ಕ್ರಮಗಳನ್ನೂ ಇದರ ಅಂಗವಾಗಿ ರಚಿಸಲಾಗುವುದು. ಕಾಞಂಗಾಡ್ ಜಿಲ್ಲಾ ಆಸ್ಪತ್ರೆ, ಚಿತ್ತಾರಿಕಲ್ಲ್ ಕುಟುಂಬ ಆರೋಗ್ಯ ಕೇಂದ್ರ, ಕಿಂಸ್ ಆಸ್ಪತ್ರೆ ಕಾಸರಗೋಡು ಈ ಸಂಸ್ಥೆಗಳಲ್ಲಿ ಪೂರ್ಣರೂಪದಲ್ಲಿ ಕೋವಿಡ್ ಸಂಹಿತೆ ಪಾಲಿಸಿ ಡ್ರೈ ರನ್ ನಡೆಸಲಾಗುವುದು.
ಮುಂಗಡ ನಿಗದಿ ಪಡಿಸಲಾದ ತಲಾ 25 ಮಂದಿಗೆ ಬೆಳಗ್ಗೆ 9 ರಿಂದ 11 ಗಂಟೆ ವರೆಗೆ ಈ ಮೂರೂ ಕೇಂದ್ರಗಳಲ್ಲಿ ವಾಕ್ಸಿನ್ ನೀಡಲಾಗುವುದು. ಡ್ರೈ ರನ್ ನಲ್ಲಿ ಭಾಗವಹಿಸುವ ಮಂದಿಯ ಮಾಹಿತಿಗಳನ್ನು ಸಂಬಂಧಪಟ್ಟ ಕೋವಿಡ್ ಎಂಬ ಪೆÇೀರ್ಟಲ್ ನಲ್ಲಿ ಅಳವಡಿಸಲಾಗಿದೆ. ಅವರು ಹಾಜರಾಗಬೇಕಾದ ಜಾಗ, ದಿನಾಂಕ ಮತ್ತು ಸಮಯ ತಿಳಿಸುವ ಎಸ್.ಎಂ.ಎಸ್. ಸಂದೇಶ ಅವರಿಗೆ ಲಭಿಸಲಿದೆ. ಡ್ರೈ ರನ್ ಕೇಂದ್ರಗಳ ವಾಕ್ಸಿನೇಷನ್ ಅಧಿಕಾರಿಗಳು ಯೂಸರ್ ಐಡಿ ಮತ್ತು ಪಾಸ್ ವರ್ಡ್ ಬಳಸಿ ಪೆÇೀರ್ಟಲ್ ಪ್ರವೇಶಿಸಿದರೆ ಆಯಾ ಕೇಂದ್ರಗಳಲ್ಲಿ ವಾಕ್ಸಿನೇಷನ್ ಪಡೆಯುವವರ ಮಾಹಿತಿ ಲಭಿಸಲಿದೆ.
ವಿತರಣೆ ಕೇಂದ್ರಗಳಲ್ಲಿ ಕಾಯುವಿಕೆ, ವಾಕ್ಸಿನೇಷನ್ ಮತ್ತು ವಾಕ್ಸಿನೇಷನ್ ನಂತರದ ನಿಗಾಗಳಿಗೆ ಪ್ರತ್ಯೇಕ ಕೊಠಡಿಗಳನ್ನು ಸಜ್ಜುಗೊಳಿಸಲಾಗಿದೆ. ವ್ಯಕ್ತಿಗತ ಮಾಹಿತಿ ಗಳೂ ಆಯಾ ಕೇಂದ್ರಗಳಲ್ಲಿ ವಾಕ್ಸಿನೇಷನ್ ನೀಡಬೇಕಾದರೇ ಎಂಬ ಪರಿಶೀಲನೆ ನಡೆಸಿ ಪ್ರವೇಶಾತಿ ನೀಡಲಾಗುವುದು. ನಂತರ ವಾಕ್ಸಿನೇಷನ್ ಅಧಿಕಾರಿ ಅಧಿಕಾರಿ ಮುಂದೆ ಹಾಜರಾಗುವ ವೇಳೆ ಮಾಹಿತಿ ಪೆÇೀರ್ಟಲ್ ನಲ್ಲಿ ದಾಖಲಿಸಿ ವಾಕ್ಸಿನೇಷನ್ ನೀಡಿಕೆಗೆ ಮಂಜೂರಾತಿ ನೀಡಲಾಗುವುದು. ವಾಕ್ಸಿನೇಷನ್ ಪಡೆಯುವವರನ್ನು ಅರ್ಧ ತಾಸಿನ ಕಾಲ ನಿಗಾದಲ್ಲಿರಿಸಲಾಗುವುದು. ನಂತರ ತೆರಳಲು ಅನುಮತಿ ನೀಡಲಾಗುವುದು.
ಡ್ರೈ ರನ್ ನಲ್ಲಿ ಇದೇ ರೀತಿ ಮುಂದುವರಿಯಲಾಗುವುದು. ವಾಕ್ಸಿನ್ ಸ್ವೀಕಾರ ಮಾಡುವವರಿಗೆ ಯಾವುದಾದರೂ ಅಡ್ಡ ಪರಿಣಾಮ ತಲೆದೋರಿದಲ್ಲಿ ತಕ್ಷಣ ತುರ್ತು ಚಿಕಿತ್ಸೆ ನೀಡುವ ಸೌಲಭ್ಯ ಈ ಕೇಂದ್ರಗಳಲ್ಲಿ ಇರುವುವು. ಇದಕ್ಕಾಗಿ ಕ್ಷಿಪ್ರ ಕ್ರಿಯಾ ಸೇನೆ ಕರ್ತವ್ಯದಲ್ಲಿರುವುದು. ಜಿಲ್ಲಾ-ಬ್ಲೋಕ್ ಮಟ್ಟದಲ್ಲಿ 24 ತಾಸೂ ಚಟುವಟಿಕೆ ನಡೆಸುವ ನಿಯಂತ್ರಣ ಕೊಠಡಿಗಳೂ ಇರುವುವು.