ನವದೆಹಲಿ: ಶೀಘ್ರದಲ್ಲೇ ಮತ್ತೊಂದು ಸುತ್ತಿನ ಹಿರಿಯ ಕಮಾಂಡರ್ ಮಟ್ಟದ ಮಾತುಕತೆಗೆ ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ತಿಳಿಸಿದೆ.
ಮತ್ತೊಂದು ಸುತ್ತಿನ ಹಿರಿಯ ಕಮಾಂಡರ್ ಮಟ್ಟದ ಸಭೆಗಾಗಿ ಉಭಯ ದೇಶಗಳು ನಿಕಟ ಸಂಪರ್ಕದಲ್ಲಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶೀಘ್ರದಲ್ಲಿಯೇ ಮತ್ತೊಂದು ಸುತ್ತಿನ ಹಿರಿಯ ಕಮಾಂಡರ್ ಮಟ್ಟದ ಮಾತುಕತೆಗಾಗಿ ಉಭಯ ದೇಶಗಳು ಒಪ್ಪಿಗೆ ಸೂಚಿಸಿವೆ. ಈ ಸಂಬಂಧ ರಾಯಭಾರಿ ಮತ್ತು ಮಿಲಿಟರಿ ಮಾಧ್ಯಮಗಳ ಮೂಲಕ ನಿಕಟ ಸಂಪರ್ಕದಲ್ಲಿರುವುದಾಗಿ ಅವರು ತಿಳಿಸಿದರು.
ಚೀನಾ ಸೇನಾ ಕಾರ್ಯಾಚರಣೆಯಿಂದಾಗಿ ಪೂರ್ವ ಲಡಾಖ್ ನಲ್ಲಿ ಭಾರತ ಮತ್ತು ಚೀನಾ ನಡುವೆ ಸಂಘರ್ಷವೇರ್ಪಟ್ಟಿದೆ. ಡಿಸೆಂಬರ್ 18 ರಂದು ನಡೆದ ಕೊನೆಯ ಸಮಾಲೋಚನಾ ಮತ್ತು ಸಮನ್ವಯ ಸಭೆಯಲ್ಲಿ, ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದಲ್ಲಿ ನಿಕಟ ಸಮಾಲೋಚನೆ ನಡೆಸಲು ಉಭಯ ದೇಶಗಳು ಒಪ್ಪಿಕೊಂಡಿದ್ದವು.