ಕಾಸರಗೋಡು: ಹರಿತ ಕೇರಳಂ ಮಿಷನ್ ನ ಯೋಜನೆಯ ಅಂಗವಾಗಿ ಜಲಾಶಯಗಳ ಶುಚೀಕರಣ ಚಟುವಟಿಕೆಗಳ ಚುರುಕುಗೊಳಿಸಲು ಜಾರಿಗೊಳಿಸಲಾದ "ಇನ್ನು ನಾ ಹರಿಯಲೇ.." ಯೋಜನೆಯ ಕಾಞಂಗಾಡ್ ನಗರಸಭೆ ಮಟ್ಟದ ಉದ್ಘಾಟನೆ ಭಾನುವಾರ ಜರಗಿತು.
ಈ ಮೂಲಕ ಕಾಞಂಗಾಡ್ ನಗರಸಭೆ ಮಟ್ಟದ 43 ವಾರ್ಡ್ ಗಳಲ್ಲೂ ಜನಪರ ಒಕ್ಕೂಟಗಳ ಮೂಲಕ ತೋಡುಗಳ, ಹಳ್ಳಗಳ ಸಹಿತ ಜಲಶಯಗಳ ಪುನಶ್ಚೇತನ ನಡೆಸುವುದು ಇಲ್ಲಿನ ಉದ್ದೇಶವಾಗಿದೆ. ಭಾನುವಾರ ಕಾಲಿಕಡವು ತೋಡಿನ ಶುಚೀಕರಣ ನಡೆಯಿತು. ವಿವಿಧ ಸಂಘ-ಸಂಸ್ಥೆಗಳ, ನೌಕರಿ ಖಾತರಿ ಯೋಜನೆ ಕಾರ್ಮಿಕರ, ಹರಿತ ಕ್ರಿಯಾ ಸೇನೆ ಕಾರ್ಯಕರ್ತರ, ಕುಟುಂಬಶ್ರೀ ಕಾರ್ಯಕರ್ತರ ಸಹಭಾಗಿತ್ವದೊಂದಿಗೆ ಈ ಕಾಮಗಾರಿ ಜರಗಿತು.
ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಉದ್ಘಾಟಿಸಿದರು. ಸಂಘಟಕ ಸಮಿತಿ ಅಧ್ಯಕ್ಷ ಪಿ.ಅಪ್ಪುಕುಟ್ಟನ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಉಪಧ್ಯಕ್ಷ ಅಬಿಲ್ ಟೆಕ್ ಅಬ್ದುಲ್ಲ, ಮಾಜಿ ಅಧ್ಯಕ್ಷ ವಿ.ವಿ.ರಮೇಶನ್, ಸದಸ್ಯರಾದ ಕೆ.ಲತಾ, ಪ್ರಭಾವತಿ, ಎಂ.ಶೋಭನಾ, ಸಿ.ಜಾನಕಿ ಕುಟ್ಟಿ, ವಿನೀತ್ ಕೃಷ್ಣನ್, ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ಹರಿತ ಕೇರಳ ಮಿಷನ್ ಆರ್.ಪಿ. ದೇವರಾಜನ್ ಉಪಸ್ಥಿತರಿದ್ದರು. ಸಂಚಾಲಕ ಟಿ.ವಿ.ಸುಜಿತ್ ಕುಮಾರ್ ಸ್ವಾಗತಿಸಿದರು. ನಗರಸಭೆ ಕಾರ್ಯದರ್ಶಿ ಎಂ.ಕೆ.ಗಿರೀಶ್ ವಂದಿಸಿದರು.