HEALTH TIPS

ಬ್ಯಾಸ್ಕೆಟ್‌ಬಾಲ್ ಜನಕ ಡಾ ಜೇಮ್ಸ್ ನೈಸ್ಮಿತ್ ಗೆ ಗೂಗಲ್ ಡೂಡಲ್ ಗೌರವ

           ನವದೆಹಲಿ: ನಿನ್ನೆಯ  ಗೂಗಲ್ ಡೂಡಲ್ ಕೆನಡಿಯನ್-ಅಮೇರಿಕನ್ ದೈಹಿಕ ಶಿಕ್ಷಕ, ಪ್ರಾಧ್ಯಾಪಕ, ವೈದ್ಯ ಮತ್ತು ತರಬೇತುದಾರ ಮುಖ್ಯವಾಗಿ ಬ್ಯಾಸ್ಕೆಟ್‍ಬಾಲ್  ಕ್ರೀಡೆಯ ಜನಕನಾದ  ಡಾ ಜೇಮ್ಸ್ ನೈಸ್ಮಿತ್ ಗೆ ಸಮರ್ಪಿತವಾಗಿದೆ.

        ಜೇಮ್ಸ್ ನವೆಂಬರ್ 6, 1861 ರಂದು ಕೆನಡಾದ ಒಂಟಾರಿಯೊದ ಅಲ್ಮಾಂಟೆ ಪಟ್ಟಣದ ಬಳಿ ಜನಿಸಿದರು.ಡಾ. ಜೇಮ್ಸ್  1891 ರಲ್ಲಿ ಜನವರಿ 15 ರಂದು ಬ್ಯಾಸ್ಕೆಟ್‍ಬಾಲ್ ಆಟವನ್ನು ಕಂಡುಹಿಡಿದರು. ಅವರು ಹೊಸ ಆಟ ಮತ್ತು ಅದರ ಮೂಲ ನಿಯಮಗಳನ್ನು ಸ್ಪ್ರಿಂಗ್‍ಫೀಲ್ಡ್ ಕಾಲೇಜು ಶಾಲೆಯ ಪತ್ರಿಕೆ “ದಿ ಟ್ರಯಾಂಗಲ್” ನ ಪುಟಗಳಲ್ಲಿ ಘೋಷಿಸಿದರು. ಶಾಲಾ ಜಿಮ್ನಾಷಿಯಂನಲ್ಲಿ ಅದರ ಪ್ರಾರಂಭವಾಗಿದ್ದು ಇಂದು ಈ ಕ್ರೀಡೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದೆ. ಬ್ಯಾಸ್ಕೆಟ್‍ಬಾಲ್  ಅನ್ನು ಇಂದು  200 ಕ್ಕೂ ಹೆಚ್ಚು ದೇಶಗಳಲ್ಲಿ ಆಡಲಾಗುತ್ತದೆ.  1890 ರಲ್ಲಿ, ಜೇಮ್ಸ್   ಮ್ಯಾಸಚೂಸೆಟ್ಸ್ ನ  ಸ್ಪ್ರಿಂಗ್ಫೀಲ್ಡ್ ನಲ್ಲಿರುವ  ವೈಎಂಸಿಎ ಅಂತರರಾಷ್ಟ್ರೀಯ ತರಬೇತಿ ಕಾಲೇಜಿನಲ್ಲಿ ಬೋಧಕರಾಗಿ  ಸೇರಿದರು.  ಚಳಿಗಾಲದಲ್ಲಿ ವಿದ್ಯಾರ್ಥಿಗಳನ್ನು  ಚಟುವಟಿಕೆಯಾಗಿರಿಸಬಲ್ಲ  ಒಳಾಂಗಣ ಆಟವನ್ನು ಅಭಿವೃದ್ಧಿಪಡಿಸಲು ಜೇಮ್ಸ್ ಗೆ ಅಲ್ಲಿ ಕೇಳಲಾಗಿತ್ತು. ಎರಡು ಪೀಚ್ ಬುಟ್ಟಿಗಳು, ಸಾಕರ್ ಬಾಲ್ ಮತ್ತು ಕೇವಲ ಹತ್ತು ನಿಯಮಗಳೊಂದಿಗೆ,ಬ್ಯಾಸ್ಕೆಟ್ ಬಾಲ್ ಆಟವು ಆ ದಿನ ಹುಟ್ಟಿಕೊಂಡಿತ್ತು!!

     ಜರ್ಮನಿಯ ಬರ್ಲಿನ್‍ನಲ್ಲಿ 1936 ರ ಕ್ರೀಡಾಕೂಟದಲ್ಲಿ ಬಾಸ್ಕೆಟ್‍ಬಾಲ್ ಒಲಿಂಪಿಕ್‍ಗೆ ಪಾದಾರ್ಪಣೆ ಮಾಡಿತು. ಅಂದು ಆ ಪಂದ್ಯದಲ್ಲಿ ಮೊದಲ ಬಾರಿಗೆ ಈ ಆಟದ ಜನಕರಾದ ಜೇಮ್ಸ್   ಮೊದಲ ಚೆಂಡನ್ನು ಬಾಸ್ಕೆಟ್ ನತ್ತ ಎಸೆದಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries