ತಿರುವನಂತಪುರ: ಕೇರಳದಲ್ಲಿ ಭತ್ತದ ಉತ್ಪಾದನೆ ಮತ್ತು ಉತ್ಪಾದಕತೆ ಈ ಹಿಂದಿಗಿಂತ ಹೆಚ್ಚಿದೆ ಎಂದು ಆರ್ಥಿಕ ಪರಿಶೀಲನಾ ವರದಿಯಲ್ಲಿ ತಿಳಿಸಲಾಗಿದೆ. 2018-20ಕ್ಕೆ ಹೋಲಿಸಿದರೆ 2019-20ರಲ್ಲಿ ಭತ್ತದ ಉತ್ಪಾದನೆ ಮತ್ತು ಉತ್ಪಾದಕತೆ ಕ್ರಮವಾಗಿ 1.52 ಮತ್ತು 5.24 ರಷ್ಟು ಹೆಚ್ಚಾಗಿದೆ.
ಕಳೆದ ಹತ್ತು ವರ್ಷಗಳಲ್ಲಿ ಅತಿ ಹೆಚ್ಚು ಉತ್ಪಾದನಾ ಸಾಮಥ್ರ್ಯ 2019-20ರಲ್ಲಿ ದಾಖಲಾಗಿದೆ. ಕೇರಳದಲ್ಲಿ ಉತ್ಪಾದನೆಯನ್ನು ಹೆಕ್ಟೇರ್‍ಗೆ 3073 ಕೆ.ಜಿ.ಗೆ ಹೆಚ್ಚಿಸಲು ಸಾಧ್ಯವಾಗಿದೆ. ಭತ್ತದ ಕೃಷಿಯ ವಿಸ್ತೀರ್ಣವೂ ಶೇಕಡಾ 46 ರಷ್ಟು ಹೆಚ್ಚಾಗಿದೆ.
ಕಳೆದ ವರ್ಷ, ರಾಜ್ಯವು ತರಕಾರಿ ಉತ್ಪಾದನೆಯಲ್ಲಿ ಹೆಚ್ಚಳವಾಗಿರುವುದು ವರದಿಯಾಗಿದೆ. ಉತ್ಪಾದನೆ 14.9 ಲಕ್ಷ ಟನ್ ನಷ್ಟು ವೃದ್ದಿಯಾಗಿದೆ. 2018-19ಕ್ಕೆ ಹೋಲಿಸಿದರೆ ತರಕಾರಿ ಉತ್ಪಾದನೆಯು ಶೇ. 23 ರಷ್ಟು ಹೆಚ್ಚಿದೆ. ಪರಿಶೀಲನಾ ವರದಿಯ ಪ್ರಕಾರ, ರಾಜ್ಯ ಕೃಷಿ ಅಭಿವೃದ್ಧಿ ಮತ್ತು ಕೃಷಿ ಕಲ್ಯಾಣ ಇಲಾಖೆ, ತರಕಾರಿ ಮತ್ತು ಉತ್ತೇಜನ ಮಂಡಳಿ, ರಾಜ್ಯ ತೋಟಗಾರಿಕೆ ಮಿಷನ್, ಸ್ಥಳೀಯಾಡಳಿತ ಇಲಾಖೆ ಮತ್ತು ಕುಟುಂಬಶ್ರೀ ಜಾರಿಗೆ ತಂದ ಅಭಿವೃದ್ಧಿ ಯೋಜನೆಗಳಿಂದ ಈ ವರ್ಧನೆ ಉಂಟಾಗಿದೆ ಎಂದು ವರದಿ ಬೊಟ್ಟುಮಾಡಿದೆ.