ಕಾಸರಗೋಡು: ಬಾವಿಕ್ಕರೆ ಕುಡಿಯುವ ನೀರಿನ ಯೋಜನೆ ಫೆಬ್ರವರಿಯಲ್ಲಿ ಉದ್ಘಾಟನೆಗೊಳ್ಳಲಿದೆ.
ಚೆರ್ಕಳದಿಂದ ಕಾಸರಗೋಡು ಪೇಟೆ ವರೆಗಿನ ಜನತೆ ಎದುರಿಸುತ್ತಿರುವ ಉಪ್ಪುನೀರು ಸರಬರಾಜು ಸಮಸ್ಯೆಗೆ ಈ ಮೂಲಕ ಶಾಶ್ವತ ಪರಿಹಾರ ಲಭಿಸಲಿದೆ.
ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯ ಪ್ರಧಾನ ಸಭಾಂಗಣದಲ್ಲಿ ಗುರುವಾರ ನಡೆದ ಉದುಮಾ ವಿಧಾನಸಭೆ ಕ್ಷೇತ್ರದ ಅಭಿವೃದ್ಧಿ ಚಟುವಟಿಕೆಗಳ ಅವಲೋಕನ ಸಭೆಯಲ್ಲಿ ಈ ಸಂಬಂಧ ತೀರ್ಮಾನ ಕೈಗೊಳ್ಳಲಾಗಿದೆ. ಶಾಸಕ ಕೆ.ಕುಂಞÂ ರಾಮನ್ ಅಧ್ಯಕ್ಷತೆ ವಹಿಸಿದ್ದರು.
ಉದ್ಘಾಟನೆಗೆ ಸಿದ್ಧವಾದ 100 ಕ್ಕೂ ಅಧಿಕ ಯೋಜನೆಗಳು
5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಪೆರಿಯ ಪ್ರೌಢಶಾಲೆ ಕಟ್ಟಡ, ಉದುಮಾ ಕ್ಷೇತ್ರದ ಅಭಿವೃದ್ಧಿ ಕ್ರಾಂತಿಯ ಸಾಲಿನಲ್ಲಿ ಗಮನಾರ್ಹ ವಾಗಿರುವ ತೆಕ್ಕಿಲ್ ಆಲಟ್ಟಿ ರಸ್ತೆ, ಕುತ್ತಿಕೋಲು ಬೋವಿಕ್ಕಾನ ರಸ್ತೆ, 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸರಕಾರದ ವ್ಯಾಪ್ತಿಯ ಅತಿ ದೊಡ್ಡ ಗಾತ್ರದ ಬೇಡಗಂನ ಮೇಕೆ ಫಾರಂ, ಕೀಯೂರು ಕರಾವಳಿ ಪೆÇಲೀಸ್ ಠಾಣೆ, ಶಾಲೆಗಳ ಕಟ್ಟಡಗಳು, ಆಸ್ಪತ್ರೆಗಳ ಕಟ್ಟಡಗಳು, ರಸ್ತೆಗಳು, ಸೇತುವೆಗಳು ಇತ್ಯಾದಿಗಳು ಈ ಸಾಲಿನಲ್ಲಿ ಸೇರಿವೆ.
ಮುಳಿಯಾರು, ಪೆರಿಯ ಆಸ್ಪತ್ರೆಗಳ ಡಯಾಲಿಸಿಟ್ ಯೂನಿಟ್ ಗಳ ಉದ್ಘಾಟನೆ ಫೆ.15ರಂದು
ಮುಳಿಯಾರು, ಪೆರಿಯ ಆಸ್ಪತ್ರೆಗಳ ಡಯಾಲಿಸಿಟ್ ಯೂನಿಟ್ ಗಳ ಉದ್ಘಾಟನೆ ಫೆ.15ರಂದು ನಡೆಯಲಿದೆ. ಪಳ್ಳಿಕ್ಕರೆ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆಗೆ ಸಿದ್ಧವಾಗಿದೆ. ಬಾವಿಕ್ಕರೆಯಿಂದ ಚಟ್ಟಂಚಾಲ್ ಮತ್ತು ಕುನ್ನುಂಪಾರೆಯಲ್ಲಿ ಟಾಂಕಿ ನಿರ್ಮಿಸಿ ಕುಡಿಯುವ ನೀರು ಸರಬರಾಜು ನಡೆಸಲು 88 ಕೋಟಿ ರೂ. ನ ಯೋಜನೆ ಉದ್ಘಾಟನೆ ಗೊಳ್ಳಲಿದೆ. ಮುಖ್ಯಮಂತ್ರಿ ಮತ್ತು ವಿವಿಧ ಇಲಾಖೆಗಳ ಸಚಿವರು ವಿವಿಧ ಚಟುವಟಿಕೆಗಳ ಉದ್ಘಾಟನೆ ನಡೆಸಲಿದ್ದಾರೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಮಟ್ಟದ ಸಿಬ್ಬಂದಿ ಉಪಸ್ಥಿತರಿದ್ದರು.