HEALTH TIPS

ಇಂದಿನಿಂದ ಆನ್‍ಲೈನ್ ಮೂಲಕ ಮೋಟಾರು ವಾಹನ ಇಲಾಖೆಯ ಹೆಚ್ಚಿನ ಸೇವೆಗಳು- ಎಲ್ಲಾ ಕಚೇರಿಗಳು ಇ-ಆಫೀಸ್ ವ್ಯವಸ್ಥೆಗೆ!

                     

            ತಿರುವನಂತಪುರ: ಮೋಟಾರು ವಾಹನ ಇಲಾಖೆಯ(ಆರ್ ಟಿ ಓ) ಹೆಚ್ಚಿನ ಸೇವೆಗಳನ್ನು ಇಂದಿನಿಂದ ಆನ್‍ಲೈನ್ ವ್ಯವಸ್ಥೆಗೆ ವರ್ಗಾಯಿಸಲಾಗಿದೆ. ಮೋಟಾರು ವಾಹನ ಇಲಾಖೆಯ ಎಲ್ಲಾ ಕಚೇರಿಗಳು ಇ-ಆಫೀಸ್ ವ್ಯವಸ್ಥೆಯಲ್ಲಿರುತ್ತವೆ.

          ಪರವಾನಗಿ ನವೀಕರಣ, ವಿಳಾಸ ಬದಲಾವಣೆ, ನಕಲು ಮತ್ತು ಹೆಚ್ಚುವರಿ ವರ್ಗ ಸೇರ್ಪಡೆಗಾಗಿ ಅಗತ್ಯವಾದ ಪ್ರಮಾಣಪತ್ರಗಳನ್ನು ಸ್ಕ್ಯಾನ್ ಮಾಡುವ ಮೂಲಕ ಮತ್ತು ಅಪ್‍ಲೋಡ್ ಮಾಡುವ ಮೂಲಕ ನೀವು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು.

       ಅರ್ಜಿ ಶುಲ್ಕದೊಂದಿಗೆ ಅಂಚೆ ವೆಚ್ಚ ಪಾವತಿಸಿದ ವಿವರ ಅಪ್ ಲೋಡ್ ಮಾಡಿದಲ್ಲಿಗೆ ಹೊಸ ಪರವಾನಗಿ ಮನೆಗೆ ತಲುಪುತ್ತದೆ. ಇಂದಿನಿಂದ, ಪರವಾನಗಿ ನಕಲು ಪಡೆಯಲು, ಅಸ್ಪಷ್ಟ / ಸಂಶಯಾಸ್ಪದ ಸಂದರ್ಭಗಳಲ್ಲಿ ಮಾತ್ರ ವೈಯಕ್ತಿಕವಾಗಿ ಕಚೇರಿಗಳಿಗೆ ಭೇಟಿ ನೀಡಿದರೆ ಸಾಕಾಗುವುದು. 

      ಶರತಿ ಸಾಫ್ಟ್‍ವೇರ್ ನಲ್ಲಿ ಅಡಕವಾಗಿರುವ ಪರವಾನಗಿಗಳನ್ನು ಸ್ಕ್ಯಾನ್ ಮಾಡಿ ಸ್ಪಷ್ಟ ದೃಷ್ಟಿ / ವೈದ್ಯಕೀಯ ಪರೀಕ್ಷೆಯ ಪ್ರಮಾಣಪತ್ರಗಳೊಂದಿಗೆ ಅಪ್‍ಲೋಡ್ ಮಾಡಿದರೆ ಯಾವುದೇ ವಿಚಾರಣೆಯಗಳಿಲ್ಲದೆ ಪರವಾನಿಗೆ ಲಭ್ಯವಾಗಲಿದೆ. ತೆರಿಗೆ ಟೋಕನ್ ಗಳು ಮತ್ತು ಪರವಾನಗಿಗಳನ್ನು ಆನ್‍ಲೈನ್ ನಲ್ಲಿ ಮುದ್ರಿಸಬಹುದು.

        ವಲಸಿಗರು ವಿದೇಶಗಳಿಂದ ತಮ್ಮ ಪರವಾನಗಿಗಳನ್ನು ನವೀಕರಿಸಬಹುದು. ನೀವು ಮಾಡಬೇಕಾಗಿರುವುದು ಆಯಾ ದೇಶದ ಅಧಿಕೃತ ವೈದ್ಯರಿಂದ ಪಡೆದ ದೃಷ್ಟಿ / ವೈದ್ಯಕೀಯ ಪರೀಕ್ಷೆಯ ಪ್ರಮಾಣಪತ್ರಗಳನ್ನು ಸ್ಕ್ಯಾನ್ ಮಾಡಿ ಅಪ್‍ಲೋಡ್ ಮಾಡಿ ಮತ್ತು ಶುಲ್ಕವನ್ನು ಪಾವತಿಸಿ. ನಿಮ್ಮ ದೃಷ್ಟಿ / ವೈದ್ಯಕೀಯ ಫಿಟ್‍ನೆಸ್ ಪರೀಕ್ಷಾ ಪ್ರಮಾಣಪತ್ರಗಳು ಮತ್ತು ಇತರ ದಾಖಲೆಗಳನ್ನು (ಪರವಾನಗಿ, ವೀಸಾ, ಪಾಸ್‍ಪೆÇೀರ್ಟ್, ಇತ್ಯಾದಿ) ವಿದೇಶದಲ್ಲಿ ಅಧಿಕೃತ ವೈದ್ಯರೊಂದಿಗೆ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡುವ ಮೂಲಕ ನೀವು ಅಂತರರಾಷ್ಟ್ರೀಯವಾಗಿ ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸಬಹುದು.

         ಇಂದಿನಿಂದ, ಎಲ್ಲಾ ಹೊಗೆ ಪರೀಕ್ಷಾ ಕೇಂದ್ರಗಳಲ್ಲಿ ಆನ್‍ಲೈನ್ ವ್ಯವಸ್ಥೆ ಕಡ್ಡಾಯವಾಗಲಿದೆ. ಹೊಗೆ ಪರೀಕ್ಷೆಯನ್ನು ಏಕೀಕೃತ ವಾಹನ ಸಾಫ್ಟ್‍ವೇರ್‍ಗೆ ಜೋಡಿಸಲಾಗುವುದು ಮತ್ತು ಅದನ್ನು ಮೋಟಾರು ವಾಹನ ಇಲಾಖೆಯಿಂದ ಪ್ರಮಾಣೀಕರಿಸಲಾಗುತ್ತದೆ.

       ಇದಲ್ಲದೆ, ಪ್ರಮಾಣಪತ್ರದ ವಿವರಗಳು ವಾಹನದಲ್ಲಿ ಮತ್ತು ವಾಹನದ ಅರ್ಜಿಯಲ್ಲಿ ಲಭ್ಯವಿರುತ್ತವೆ. ಕೋವಿಡ್ ಸನ್ನಿವೇಶದಲ್ಲಿ ಆನ್‍ಲೈನ್ ಪರವಾನಗಿ ಪರೀಕ್ಷೆಯ ಯಶಸ್ಸಿನ ನಂತರ ಇದು ಮುಂದುವರಿಯುತ್ತದೆ. ಆನ್‍ಲೈನ್ ಪರೀಕ್ಷೆಯಲ್ಲಿ ಸುಮಾರು ನಾಲ್ಕು ಲಕ್ಷ ಜನರು ಈವರೆಗೆ ಉತ್ತೀರ್ಣರಾಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries