ಬೀಜಿಂಗ್: ಪೂರ್ವ ಚೀನಾದಲ್ಲಿ ತಯಾರಾದ ಐಸ್‌ಕ್ರೀಂನಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ.
'ಟಿಯಾಂಜಿನ್‌ನಲ್ಲಿರುವ ಡಕಿಯೊಡಾವೊ ಫುಡ್ ಕೋ.ಲಿಮಿಟೆಡ್‌ನ ಐಸ್‌ಕ್ರೀಂನಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಈ ಸಂಸ್ಥೆಯ ಸಿಬ್ಬಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ, ಅವರಿಗೆ ಸೋಂಕು ತಗುಲಿರುವ ಬಗ್ಗೆ ಯಾವುದೇ ಪ್ರಕರಣಗಳು ವರದಿಯಾಗಿಲ್ಲ' ಎಂದು ಅಲ್ಲಿನ ಸ್ಥಳೀಯ ಆಡಳಿತ ತಿಳಿಸಿದೆ.
ಐಸ್‌ಕ್ರೀಂನ 29,000 ಪೆಟ್ಟಿಗೆಗಳು ಇನ್ನೂ ಮಾರಾಟವಾಗಿಲ್ಲ. ಆದರೆ, ಇದುವರೆಗೆ ಮಾರಾಟವಾಗಿರುವ 390 ಪೆಟ್ಟಿಗೆಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಈ ಬಗ್ಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸರ್ಕಾರ ಹೇಳಿದೆ.