ತಿರುವನಂತಪುರ: ರಾಜ್ಯದಲ್ಲಿ ಕೊರೋನಾ ಪರೀಕ್ಷಾ ಸಕಾರಾತ್ಮಕತೆಯ ಪ್ರಮಾಣ ಹೆಚ್ಚುತ್ತಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಇಂದು ಹೇಳಿದರು. ಅನೇಕ ಸ್ಥಳಗಳಲ್ಲಿ ರೋಗದ ಹರಡುವಿಕೆಯು ಹೆಚ್ಚಾಗುತ್ತಿದೆ.ಆದ್ದರಿಂದ ಸಂಪೂರ್ಣ ಲಾಕ್‌ಡೌನ್ ವಿಧಿಸಿದರೆ ಮಾತ್ರ ರೋಗ ಹರಡುವುದನ್ನು ಕಡಿಮೆ ಮಾಡಬಹುದು ಎಂದರು.
ಮತ್ತೊಂದು ಲಾಕ್ ಡೌನ್ ಮಾನವ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಕೇಂದ್ರವು ಅನ್ಲಾಕ್ ಪ್ರಾರಂಭಿಸುವುದರೊಂದಿಗೆ ರಾಜ್ಯದಲ್ಲಿ ನಿಯಂತ್ರಣಗಳನ್ನು ಹಂತಾನು ಹಂತ ಹಿಂಪಡೆಯಲಾಯಿತು. ಕೇರಳದಲ್ಲಿ ಜನರು ನಿಯಮಗಳನ್ನು ಪಾಲಿಸಿದರು. ಆದ್ದರಿಂದ ಪ್ರಕರಣಗಳು ಕಡಿಮೆಯಾಗಿದ್ದವು. ಆದರೆ ಆ ಬಳಿಕ ಹೋರಾಟಗಳು ಮತ್ತು ಚುನಾವಣೆ ರೋಗದ ಹರಡುವಿಕೆಯನ್ನು ಉಲ್ಬಣಗೊಳಿಸಿದೆ ಮತ್ತು ಚುನಾವಣೆಯ ನಂತರ ಕೊರೋನಾ ಬಾಧಿತರ ಸಂಖ್ಯೆ ಹೆಚ್ಚಾಯಿತು ಎಂದು ಸಚಿವೆ ಹೇಳಿದರು.
ಕಳೆದ ಒಂದು ವರ್ಷದಿಂದ ನಿರ್ಬಂಧಗಳು ಜಾರಿಯಲ್ಲಿರುವುದರಿಂದ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳದ ಹೊರತಾಗಿಯೂ, ಸಾವಿನ ಪ್ರಮಾಣವನ್ನು ಶೇಕಡಾ ಅರ್ಧಕ್ಕಿಂತ ಕಡಿಮೆ ಇರಿಸಲು ರಾಜ್ಯವು ಯಶಸ್ವಿಯಾಗಿದೆ. ಲಸಿಕೆ ತೆಗೆದುಕೊಳ್ಳಬೇಕು ಮತ್ತು ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಾಸ್ಕ್ ಮತ್ತು ಸ್ಯಾನಿಟೈಜರ್‌ಗಳನ್ನು ತಪ್ಪಿಸಬಾರದು ಎಂದು ಕೆ.ಕೆ.ಶೈಲಜಾ ಸ್ಪಷ್ಟಪಡಿಸಿರುವರು.ಹಾಗಿದ್ದೂ ಸಾರ್ವಜನಿಕರು ಸರ್ಕಾರದೊಂದಿಗೆ ಸಹಕರಿಸದಿದ್ದರೆ ಲಾಕ್ ಡೌನ್ ಮತ್ತೊಮ್ಮೆ ಅನಿವಾರ್ಯ ಎಂದು ಸಚಿವೆ ಕೆ.ಕೆ.ಶೈಲಜಾ ಮಾಹಿತಿ ನೀಡಿರುವರು.