ಕಾಸರಗೋಡು: ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಆರ್ಯಾಶ್ರೀ ಅವರಿಗೆ ಬಂಗಳಂ ರಾಂಗಡಂ ಕೋಳಕಾಡ್ ಕೂಡಿ ಎಂಬಲ್ಲಿ ನೂತನ ನಿವಾಸ ನಿರ್ಮಾಣಗೊಂಡಿದೆ. ಈ ಸಂಬಂಧ ಶನಿವಾರ ನಡೆದ ಸಮಾರಂಭದಲ್ಲಿ ಕ್ರೀಡಾ ಸಚಿವ ಇ.ಪಿ.ಜಯರಾಜನ್ ಕೀಲಿಕೈ ಹಸ್ತಾಂತರ ನಡೆಸಿದರು.
ಈ ವೇಳೆ ಮಾತನಾಡಿದ ಸಚಿವ ರಾಷ್ಟ್ರೀಯ, ಅಂತಾರಾಷಟ್ರೀಯ ಸ್ಪರ್ಧೆಗಳಲ್ಲಿ 2015 ವರೆಗೆ ಮೊದಲ ಮೂರು ಬಹುಮಾನಗಳನ್ನು ಗಳಿಸಿರುವ ರಾಜ್ಯದ 498 ಕ್ರೀಡಾ ಪಟುಗಳಿಗೆ ಸೂಪರ್ ನ್ಯೂಮರಿ ಹುದ್ದೆಗಳನ್ನು ಸೃಷ್ಟಿಸಿ ನೇಮಕಾತಿ ನಡೆಸಲಾಗಿದೆ. ತಕ್ಷಣ ನೇಮಕಾತಿ ಪಡೆಯಲಿರುವ 54 ಮಮದಿಯ ಪಟ್ಟಿ ಪ್ರಕಟಿಸಲಾಗಿದೆ. ಈ ಮೂಲಕ 552 ಮಂದಿ ಕ್ರೀಡಾ ಪಟುಗಳಿಗೆ ನೌಕರಿ ಒದಗಿಸಲಾಗಿದೆ ಎಂದವರು ನುಡಿದರು.
ನೀಲೇಶ್ವರ ನಗರಸಭೆ ಅಧ್ಯಕ್ಷೆ ಟಿ.ವಿ.ಶಾಂತಾ ಅಧ್ಯಕ್ಷತೆ ವಹಿಸಿದ್ದರು. ಉಪಧ್ಯಕ್ಷ ಮುಹಮ್ಮದ್ ರಾಫಿ , ಕಿನಾನೂರು ಕರಿಂದಲಂ ಪಂಚಾಯತ್ ಅಧ್ಯಕ್ಷ ಟಿ.ಕೆ.ರವಿ, ನಗರಸಭೆ ಸದಸ್ಯೆ ಷೈನಿ ಕುಂಞÂ್ಞ ಕಣ್ಣನ್, ಜಿಲ್ಲಾ ಕ್ರೀಡಾ ಮಂಡಳಿ ಪಿ.ಹಬೀಬ್ ರಹಮಾನ್, ರಾಜ್ಯ ಕ್ರೀಡಾ ಮಂಡಳಿ ಸದಸ್ಯ ಟಿ.ವಿ.ಬಾಲನ್ ಮಣಿಯಾಟ್, ನೀಲೇಶ್ವರ ನಗರಸಭೆ ಮಾಜಿ ಅಧ್ಯಕ್ಷ ಪೆÇ್ರ.ಕೆ.ಪಿ.ಜಯರಾಜನ್, ಜಿಲ್ಲಾ ಕ್ರೀಡಾ ಮಂಡಳಿ ಕಾರ್ಯಕಾರಿ ಸದಸ್ಯ ಅನಿಲ್ ಬಂಗಳಂ ಮೊದಲಾದವರು ಉಪಸ್ಥಿತರಿದ್ದರು.