ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ 2020ನೇ ಸಾಲಿನಲ್ಲಿ ನಡೆಸಿದ ಶಾಸ್ತ್ರೀಯ ಸಂಗೀತ ಜ್ಯೂನಿಯರ್ ಪರೀಕ್ಷೆಯಲ್ಲಿ ಚಿನ್ಮಯೀ ವಾಶೆಮನೆ ಶೇ.94 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾಳೆ. ಈಕೆ ಸರ್ವೋದಯ ಶಾಸ್ತ್ರೀಯ ಸಂಗೀತ ಶಾಲೆ ಬದಿಯಡ್ಕ ಇದರ ಶಿಕ್ಷಕಿಯಾದ ವಿದುಷಿ ಸಾವಿತ್ರಿ. ಕೆ .ಭಟ್ ದೊಡ್ಡಮಾಣಿ ಇವರ ಶಿಷ್ಯೆಯಾಗಿದ್ದು ಚೈತನ್ಯ ಮೂರ್ತಿ ವಾಶೆಮನೆ ಹಾಗೂ ಶಿಲ್ಪಾ ಚೈತನ್ಯ ಇವರ ಪುತ್ರಿ. ಈಕೆ ಚಿನ್ಮಯ ವಿದ್ಯಾಲಯ ಬದಿಯಡ್ಕ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ.