HEALTH TIPS

ಪಾಣತ್ತೂರು ಅಪಘಾತ-ಮೃತರ ಸಂಖ್ಯೆ ಏಳಕ್ಕೆ ಏರಿಕೆ

        ಕಾಸರಗೋಡು: ವಿವಾಹ ಸಮಾರಂಭಕ್ಕೆ ಜನರನ್ನು ಕರೆದೊಯ್ಯುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಮನೆಯೊಂದಕ್ಕೆ ಉರುಳಿ ಬಿದ್ದ ಘಟನೆಯಲ್ಲಿ ದಂಪತಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ. 

      ಭಾನುವಾರ ಮಧ್ಯಾಹ್ನ ಪಾಣತ್ತೂರು ಪರಿಯಾರ್ ನಲ್ಲಿ ಈ ಅಪಘಾತ ಸಂಭವಿಸಿದೆ. ಮೃತರನ್ನು ಸುಳ್ಯದ ರವಿಚಂದ್ರನ್ (40) ಮತ್ತು ಅವರ ಪತ್ನಿ ಜಯಲಕ್ಷ್ಮಿ (39) ಎಂದು ಗುರುತಿಸಲಾಗಿದೆ. ಜೊತೆಗೆ ಪುತ್ತೂರಿನ ಸುಮತಿ (50), ಬಲ್ನಾಡ್ ನ ರಾಜೇಶ್(45), ಅರ್ಧಮೂಲೆ ನಿವಾಸಿ ನಾರಾಯಣ ಎಂಬವರ ಪುತ್ರ ಶ್ರೇಯಸ್(13), ಬಂಟ್ವಾಳದ ಶಶಿಧರ ಪೂಜಾರಿ (43), ಪುತ್ತೂರಿನ ರಾಜೇಶ್ ಅವರ ಪುತ್ರ ಆದರ್ಶ್ (12) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಶಶಿಧರ ಮಂಗಳೂರಿನ ಆಸ್ಪತ್ರೆಯಲ್ಲಿ  ನಿಧನರಾದರು. ಆದರ್ಶ್ ಅವರ ಶವವನ್ನು ಕಾಞಂಗಾಡ್ ನಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿರಿಸಲಾಗಿದೆ. ಇತರ ಐವರ ಶವಗಳು ಪೂಡಂಕಲ್ ತಾಲ್ಲೂಕು ಆಸ್ಪತ್ರೆಯಲ್ಲಿವೆ.

   ಮದುವೆಗೆ ತೆರಳುತ್ತಿದ್ದ ತಂಡವಿದ್ದ ಬಸ್ ಭಾನುವಾರ ಪುತ್ತೂರು-ಈಶ್ವರಮಂಗಲದಿಂದ ಪಾಣತ್ತೂರು-ಕರಿಕ್ಕೆ ದಾರಿಯಾಗಿ ಚೆತ್ತುಕ್ಕಯಕ್ಕೆ ಪ್ರವಾಸಿ ಬಸ್‍ನಲ್ಲಿ ಪ್ರಯಾಣಿಸುತ್ತಿತ್ತು. ಪಾಣತ್ತೂರು-ಸುಳ್ಯ ರಸ್ತೆಯ ಪರಿಯಾರ್ ನಲ್ಲಿ ಈ ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿದ ಬಸ್ ರಸ್ತೆಯ ಬದಿಯಲ್ಲಿ 10 ಮೀಟರ್ ಆಳಕ್ಕೆ ಧುಮುಕಿತು. ಜೋಸ್ ಎಂಬವರ ಮನೆಗೆ ಬಸ್ ಮಗುಚಿದ್ದು  ಮನೆ ಭಾಗಶಃ ನಾಶವಾಗಿದೆ. ಮನೆಯಲ್ಲಿ ಯಾರೂ ಇದ್ದಿರಲಿಲ್ಲ.

      ಉಪಜಿಲ್ಲಾಧಿಕಾರಿಗೆ ತನಿಖಾ ಜವಾಬ್ದಾರಿ:

   ಅಪಘಾತದ ಕುರಿತಾದ ಸಮಗ್ರ ತನಿಖೆಗೆ ಕಾಞಂಗಾಡ್ ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ ಅವರಿಗೆ ಜವಾಬ್ದಾರಿ ನೀಡಲಾಗಿದೆ ಎಮದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.

     ಮುಖ್ಯಮಂತ್ರಿ ಸಹಿತ ಮಂತ್ರಿಗಳಿಂದ ಶ್ರದ್ದಾಂಜಲಿ-ತನಿಖೆಗೆ ಆದೇಶ:

    ಅಪಘಾತದ ವಿಷಯ ತಿಳಿದುಬರುತ್ತಿರುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜಿಲ್ಲಾಧಿಕಾರಿಗಳಿಂದ ಮಾಹಹಿತಿ ಸಂಗ್ರಹಿಸಿ ತುರ್ತು ಕ್ರಮಗಳಿಗೆ ಆದೇಶ ನೀಡಿದರು. ಜೊತೆಗೆ ಮೃತರಾದವರಿಗೆ ಶ್ರದ್ದಾಂಜಲಿ ಸಲ್ಲಿಸಿದರು. 

    ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ಅವರು ತುರ್ತು ವರದಿಗೆ ಸೂಚನೆ ನೀಡಿರುವರು. ಕಂದಾಯ ಸಚಿವ ಇ.ಚಂದ್ರಶೇಖರನ್ ಅವರು ಗಾಯಗೊಂಡವರಿಗೆ ತುರ್ತು ಮತ್ತು ಗರಿಷ್ಠ ಮಟ್ಟದ ಚಿಕಿತ್ಸೆ ನೀಡಲು ಜಿಲ್ಲಾ ವೈದ್ಯಾಧಿಕಾರಿ ಸಹಿತ ಅಧಿಕಾರಿಗಳಿಗೆ ಸೂಚನೆ ನೀಡಿರುವರು. ಮೃತರಾದವರ ಮರಣೋತ್ತರ ಪರೀಕ್ಷೆಗಳನ್ನು ಶೀಘ್ರ ಪೂರೈಸಿ ಮರಣೋತ್ತರ ವರದಿಯನ್ನು ತೊಂದರೆಗಳಿಲ್ಲದೆ ನೀಡುವಂತೆ ಅವರು ತಿಳಿಸಿರುವರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries