ತಿರುವನಂತಪುರ: ಕೋವಿಡ್ ಅಂಕಿಅಂಶಗಳನ್ನು ಕೇರಳ ಮರೆಮಾಚುತ್ತಿದೆ ಎಂಬ ಮಹತ್ತರ ಆರೋಪವೊಂದನ್ನು ಕೇಂದ್ರ ಸಚಿವ ವಿ.ಮುರಳೀಧರನ್ ಸರ್ಕಾರದ ವಿರುದ್ದ ಸಿಡಿಸಿದ್ದಾರೆ. ಕೋವಿಡ್ ಕಾರಣದಿಂದ ಉಂಟಾಗುವ ಮರಣ ಸಂಖ್ಯೆಯನ್ನು ಕೇರಳ ಉದ್ದೇಶಪೂರ್ವಕವಾಗಿ ಮರೆಮಾಚುತ್ತಿದೆ. ದೇಶದ ಈಗಿನ ಕೋವಿಡ್ ಅಂಕಿಅಂಶಗಳಲ್ಲಿ ಕೇರಳದಲ್ಲಿ ಶೇ.40 ಸೋಂಕು ಬಾಧಿತರಿದ್ದಾರೆ ಎಂದು ಅವರು ಬೊಟ್ಟುಮಾಡಿದರು.
ಕೇರಳದಲ್ಲಿ ಕೋವಿಡ್ ಸೋಂಕು ಆತಂಕಕಾರಿಯಾಗುವಷ್ಟು ಹೆಚ್ಚಿದೆ. ಕೋವಿಡ್ ನಿಯಂತ್ರಣದಲ್ಲಿ ಸರ್ಕಾರ ಪೂರ್ಣವಾಗಿ ಪರಾಜಯಗೊಂಡಿದೆ. ಪ್ರತಿಪಕ್ಷಕ್ಕೆ ಈ ಬಗ್ಗೆ ಯಾವ ಅರಿವೂ ಇದ್ದಂತಿಲ್ಲ. ರಾಜ್ಯದ ಆರೋಗ್ಯ ಸಚಿವೆಗೆ ಆರೋಗ್ಯ ಪತ್ರಿಕೆಗಳಲ್ಲಿ ಕವರ್ ಪೇಜ್ ನಲ್ಲಿ ಚಿತ್ರಗಳು ಪ್ರಕಟಗೊಳ್ಳಲು ಮಾತ್ರ ಎಂದು ವಿ.ಮುರಳೀಧರನ್ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.