ತಿರುವನಂತಪುರ: ಈ ವರ್ಷದ ಆಟ್ಟುಕ್ಕಲ್ ಪುಂಗಾಲ ಉತ್ಸವ ನಡೆಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೋವಿಡ್ ನಿಬಂಧನೆಗಳಿಗೆ ಅನುಸಾರ ಕಾರ್ಯಕ್ರಮ ನಡೆಸಲು ನಿನ್ನೆ ತೀರ್ಮಾನಿಸಲಾಯಿತು. ದೇವಾಲಯದ ಆವರಣದಲ್ಲಿ ಮಾತ್ರ ಪೊಂಗಾಲವನ್ನು ನಡೆಸಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಪೊಂಗಾಲಾವನ್ನು ಅನುಮತಿಸಲಾಗುವುದಿಲ್ಲ. ಜನರು ತಮ್ಮ ಸ್ವಂತ ಮನೆಗಳಲ್ಲಿ ಪೊಂಗಾಲ ಆಚರಣೆ ನಡೆಸಬಹುದು ಎಂದು ಸಚಿವ ಕಡಕಂಪಳ್ಳಿ ಸುರೇಂದ್ರನ್ ಹೇಳಿರುವರು.
ಶಬರಿಮಲೆ ಮಾದರಿಯಲ್ಲಿ ಆನ್‍ಲೈನ್ ನೋಂದಣಿ ಮೂಲಕ ದೇವಾಲಯಕ್ಕೆ ಪ್ರವೇಶಿಸಲು ಅವಕಾಶವಿದೆ. ದೇವಾಲಯಕ್ಕೆ ಪ್ರವೇಶಿಸಲು ಗರಿಷ್ಠ ಎಷ್ಟು ಜನರೆಂಬುದನ್ನು ಬಳಿಕ ನಿರ್ಧರಿಸಲಾಗುತ್ತದೆ.
ಉತ್ಸವದ ಪ್ರದೇಶವು ದೇವಾಲಯದ ಸುತ್ತಲಿನ ವಾರ್ಡ್‍ಗಳಾಗಿರುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ಪೊಂಗಾಲ ನಡೆಸಲು ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ಸಭೆ ಕರೆಯಲಾಗಿತ್ತು. ಹಸಿರು ನಿಬಂಧನೆ ಮತ್ತು ಕೋವಿಡ್ ಮಾನದಂಡಗಳಿಗೆ ಅನುಸಾರವಾಗಿ ಆಹಾರವನ್ನು ನೀಡಲಾಗುವುದು.
ಕುತಿಯೊಟ್ಟಂ, ದೀಪಾಲಂಕಾರ ಮತ್ತು ತಲಪೆÇ್ಪೀಲಿಯಂತಹ ಸಮಾರಂಭಗಳಿಗೆ ಅವಕಾಶ ಇರುವುದಿಲ್ಲ. ಪೊಂಗಾಲಕ್ಕಿಂತ ಮೊದಲು ವಿವಿಧ ಇಲಾಖೆಗಳನ್ನು ¥ಕೇಂದ್ರೀಕರಿಸಿ ಸಿದ್ಧತೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು ಎಂದು ಸಚಿವರು ಹೇಳಿರುವರು.