ಕಾಸರಗೋಡು: ಕೇಂದ್ರ ಸ್ಟ್ಯಾಟಿಸ್ಟಿಕ್ಸ್ ಸಚಿವಾಲಯ ನಡೆಸುವ ಏಳನೇ ಆರ್ಥಿಕ ಗಣತಿ ಅಂಗವಾಗಿ ಮನೆಗಳಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಆಗಮಿಸುವ ಸಿ.ಎಸ್.ಸಿ ಎನ್ಯುಮರೇಟರ್‍ಗಳಿಗೆ ಮನೆ ಯಜಮಾನನ ಹೆಸರು, ಮನೆ ವಿಳಾಸ, ಮನೆಯಲ್ಲಿರುವ ಸದಸ್ಯರ ಸಂಖ್ಯೆ ಸಹಿತ ಮಾಹಿತಿ ನೀಡುವಂತೆ ಕೋಯಿಕ್ಕೋಡ್ ನ್ಯಾಶನಲ್ ಸ್ಟ್ಯಾಟಿಸ್ಟಿಕಲ್ ಕಚೇರಿ ನಿರ್ದೇಶಕ ಎಫ್. ಮಹಮ್ಮದ್ ಯಾಸಿರ್ ತಿಳಿಸಿದ್ದಾರೆ.
ಸಂಸ್ಥೆಗಳು ಹಾಗೂ ಅದರಲ್ಲಿ ಕೆಲಸ ನಿರ್ವಹಿಸುವವರು, ನಿರ್ಮಾಣಕಾರ್ಯಗಳು, ಕಾರ್ಮಿಕರ ಸಂಖ್ಯೆ, ವಾರ್ಷಿಕ ಆದಾಯ, ನೋಂದಾವಣೆ, ಇತರ ಶಾಖೆಗಳು, ಮೂಲಧನದ ಆದಾಯಮಾರ್ಗಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ತಪ್ಪು ಮಾಹಿತಿ ನೀಡುವುದು, ಎನ್ಯುಮರೇಟರ್‍ಗಳಿಗೆ ತಡೆಯೊಡ್ಡುವುದು ನಡೆಸದಿರುವಂತೆ ಸೂಚಿಸಲಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಸಕಾಲಕ್ಕೆ ಗಣತಿ ನಡೆಸಲಾಗದಿರುವುದರಿಂದ ಮಾ. 31ರ ವರೆಗೆ ವಿಸ್ತರಿಸಲಾಗಿದೆ. ಭಾರತದಲ್ಲಿ 1977ರಿಂದ ಆರ್ಥಿಕ ಗಣತಿ ನಡೆದುಬರುತ್ತಿದೆ. ಆರನೇ ಆರ್ಥಿಕ ಗಣತಿಯನ್ನು 2013ರಲ್ಲಿ ರಾಜ್ಯ ಎಕನಾಮಿಕ್ಸ್ ಏಂಡ್ ಸ್ಟ್ಯಾಟಿಸ್ಟಿಕ್ ಇಲಾಖೆ ನಡೆಸಿದೆ.