ತಿರುವನಂತಪುರ: ಮದ್ಯ ಖರೀದಿಸಲು ರಾಜ್ಯದಲ್ಲಿ ಇನ್ನು ಬೆವ್ಕ್ಯೂ ಆಪ್ ಅಗತ್ಯವಿಲ್ಲವೆಂದು ಸರ್ಕಾರ ಆದೇಶ ಹೊರಡಿಸಿದೆ. ಮದ್ಯ ಖರೀದಿಸಲು ಬೆವ್ಕ್ಯೂ ಅಪ್ಲಿಕೇಶನ್ ಅಗತ್ಯವಿಲ್ಲದ ಕಾರಣ ಅಪ್ಲಿಕೇಶನ್ ರದ್ದುಗೊಂಡಿದೆ. ಲಾಕ್ ಡೌನ್ ಸಮಯದಲ್ಲಿ ಮದ್ಯ ಮಾರಾಟಕ್ಕಾಗಿ ಈ ಅಪ್ಲಿಕೇಶನ್ ಅನ್ನು ಪರಿಚಯಿಸಲಾಗಿತ್ತು.
ಕೋವಿಡ್ ನಿಯಂತ್ರಣದ ಭಾಗವಾಗಿ ಲಾಕ್ ಡೌನ್ ಸಮಯದಲ್ಲಿ ಆಲ್ಕೋಹಾಲ್ ಖರೀದಿಸಲು ಟೋಕನ್ ವ್ಯವಸ್ಥೆ ಪರಿಚಯಿಸಲಾಗಿತ್ತು. ಬಾರ್‍ಗಳನ್ನು ತೆರೆಯುವುದರೊಂದಿಗೆ, ಬೆವ್ಕೊ ಮತ್ತು ಕನ್ಸ್ಯೂಮರ್ ಫೆಡ್ ಮಳಿಗೆಗಳ ಮೂಲಕ ಮದ್ಯ ಮಾರಾಟವನ್ನು ಪ್ರತ್ಯೇಕವಾಗಿ ಮಾಡಲಾಯಿತು. ಆಪ್ ಹಿಂಪಡೆಯುವಂತೆ ಬೆವ್ಕೊ ಸರ್ಕಾರವನ್ನು ಕೇಳಿತ್ತು. ಟೋಕನ್ ಗಳು ಆಪ್ ಮೂಲಕ ಬಾರ್ ಗಳಿಗೆ ಅನುಕೂಲತೆಯೊದಗಿಸಿದ್ದರಿಂದ ಔಟ್ ಲೆಟ್ ಮಾರಾಟ ಕುಸಿಯಲು ಕಾರಣವಾಗಿತ್ತು.