ತ್ರಿಶೂರ್: ಧಾತ್ರಿ ಹೇರ್ ಆಯಿಲ್ ಹಚ್ಚಿದ ನಂತರ ಕೂದಲು ಜಾಹೀರಾತಿನಲ್ಲಿ ತಿಳಿಸಿರುವಂತೆ ಬೆಳೆಯಲಿಲ್ಲ ಎಂಬ ದೂರಿನ ಮೇರೆಗೆ ನಟ ಅನೂಪ್ ಮೆನನ್ ಮತ್ತು ಇತರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಗ್ರಾಹಕರ ದೂರು ಪರಿಹಾರದ ಆಯೋಗವು ಗ್ರಾಹಕರ ದೂರಿನ ಮೇರೆಗೆ ಕ್ರಮ ಕೈಗೊಂಡಿದೆ.
ಗ್ರಾಹಕರಿಗೆ ತಪ್ಪಾದ ಮಾಹಿತಿಯನ್ನು ನೀಡಿರುವ ಬಗ್ಗೆ ಎರ್ನಾಕುಳಂ ವೆಣ್ಣಲಯಿಲ ಎಂಬಲ್ಲಿಯ ಧಾತ್ರಿ ಆಯುರ್ವೇಧ ಪ್ರೈವೆಟ್ ಲಿಮಿಟೆಡ್ ಮೇನೇಜಿಂಗ್ ಡೈರೆಕ್ಟರ್, ಜಾಹೀರಾತಿನಲ್ಲಿ ಅಭಿನಯಿಸಿದ ಚಿತ್ರ ನಟ ಅನೂಪ್ ಮೆನನ್ ಎಂಬವರ ಮೇಲೆ ಕ್ರಮ ಕೈಗೊಳ್ಳಲಾಗಿದೆ.
ವೈಲತೂರ್ ಮೂಲದ ಫ್ರಾನ್ಸಿಸ್ ವಡಕ್ಕನ್ ಅವರ ಅರ್ಜಿಯ ಮೇರೆಗೆ ತ್ರಿಶೂರ್ ಗ್ರಾಹಕ ಆಯೋಗದ ತೀರ್ಪು ಹೊರಬಿದ್ದಿದೆ. ಅನೂಪ್ ಮೆನನ್ ಅವರು ಉತ್ಪನ್ನದ ಗುಣಮಟ್ಟವನ್ನು ಮನಗಾಣದೆ ಜಾಹೀರಾತುಗಳಲ್ಲಿ ನಟಿಸಿದ್ದಾರೆ ಎಂಬ ದೂರು ದಾಖಲಾಗಿತ್ತು. ಉತ್ಪನ್ನವನ್ನು ಮಾರಾಟ ಮಾಡಿದ ವೈಲತೂರ್‍ನ ಎ ಒನ್ ಮೆಡಿಕಲ್ಸ್‍ನ ಮಾಲೀಕರೂ ಈ ಪ್ರಕರಣದಲ್ಲಿ 3,000 ರೂ.ಗಳ ದಂಡವನ್ನು ಪಾವತಿಸಬೇಕಾಗುತ್ತದೆ.