ಕೋಝಿಕ್ಕೋಡ್: ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಕೇರಳಕ್ಕೆ ಎರಡು ದಿನಗಳ ಭೇಟಿಗಾಗಿ ಬುಧವಾರ ಆಗಮಿಸಿದರು. ಮಲಪ್ಪುರಂ ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಾಹುಲ್ ಬುಧವಾರ ರಾತ್ರಿ ವಯನಾಡಿಗೆ ಆಗಮಿಸುವರು.
ಬುಧವಾರ ಬೆಳಿಗ್ಗೆ 11.30 ಕ್ಕೆ ಕರಿಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಹುಲ್ ಅವರನ್ನು ಯುಡಿಎಫ್ ಮುಖಂಡರು ಸ್ವಾಗತಿಸಿದರು. ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಯುಡಿಎಫ್ ಮುಖಂಡರನ್ನು ಭೇಟಿಯಾದರು.
ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಮಾತನಾಡಿ, ಚುನಾವಣೆಗೆ ಸಂಬಂಧಿಸಿದಂತೆ ಪ್ರಾಥಮಿಕ ಚರ್ಚೆಗಳು ನಡೆದಿವೆ ಮತ್ತು ಯಾವುದೇ ಸ್ಥಾನ ಹಂಚಿಕೆಗಳ ಬಗ್ಗೆ ಚರ್ಚಿಸಲಾಗಿಲ್ಲ ಎಂದರು. ರಾಹುಲ್ ಗಾಂಧಿ ಅವರೊಂದಿಗೆ ಚುನಾವಣಾ ಮಾತುಕತೆ ನಡೆಸಿಲ್ಲ. ಸೌಹಾರ್ಧ ಮಾತುಕತೆ ನಡೆಸಲಾಯಿತು ಎಂದು ಯುಡಿಎಫ್ ಅಧ್ಯಕ್ಷ ಕುಂಞಲಿಕುಟ್ಟಿ ಹೇಳಿದರು.