HEALTH TIPS

ಕೋವಿಡ್‌ ಲಸಿಕೆ ಕಾರ್ಯಕ್ರಮ: ಮತಗಟ್ಟೆ ಮಾಹಿತಿ ಬಳಕೆಗೆ ಚುನಾವಣಾ ಆಯೋಗ ಸಮ್ಮತಿ

          ನವದೆಹಲಿ: ಕೋವಿಡ್‌-19 ವಿರುದ್ಧದ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ತಾನು ಹೊಂದಿರುವ ಮತಗಟ್ಟೆ ಮಟ್ಟದ ಮಾಹಿತಿಯನ್ನು ಬಳಸಲು ಚುನಾವಣಾ ಆಯೋಗ ಸಮ್ಮತಿಸಿದೆ.

          ಈ ಕಾರ್ಯಕ್ರಮ ಪೂರ್ಣಗೊಂಡ ಬಳಿಕ ಆರೋಗ್ಯ ಇಲಾಖೆ ಅಧಿಕಾರಿಗಳು ಆಯೋಗದಿಂದ ಪಡೆದ ವಿವರಗಳನ್ನು ಅಳಿಸಿ ಹಾಕಬೇಕು ಎಂದೂ ಆಯೋಗ ಹೇಳಿದೆ.

       ಆಯಾ ಮತಗಟ್ಟೆ ವ್ಯಾಪ್ತಿಯಲ್ಲಿರುವ 50 ವರ್ಷ ಮೇಲ್ಪಟ್ಟ ವಯೋಮಾನದವರನ್ನು ಗುರುತಿಸಲು ಆಯೋಗದ ಬಳಿ ಇರುವ ಮಾಹಿತಿ ನೀಡುವಂತೆ ಕೋರಿ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್‌ ಭಲ್ಲಾ ಡಿ. 31ರಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್‌ ಅರೋರಾ ಅವರಿಗೆ ಪತ್ರ ಬರೆದಿದ್ದರು ಎಂದು ಮೂಲಗಳು ಹೇಳಿವೆ.

        'ಆಯೋಗದಿಂದ ಪಡೆಯುವ ಮಾಹಿತಿಯನ್ನು ಈಗ ಬಳಕೆಯಲ್ಲಿರುವ ಸೈಬರ್‌ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಕಾಪಾಡಲಾಗುವುದು. ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಮಾತ್ರ ಈ ಮಾಹಿತಿಯನ್ನು ಬಳಸಿಕೊಳ್ಳುವುದಾಗಿ ಭಲ್ಲಾ ಅವರು ಆಯೋಗಕ್ಕೆ ಭರವಸೆ ನೀಡಿದ್ದಾರೆ' ಎಂದು ಇವೇ ಮೂಲಗಳು ಹೇಳಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries