ಕಾಸರಗೋಡು: ಕಾಸರಗೋಡು ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಸದಸ್ಯರ ಆಯ್ಕೆ ಅವಿರೋಧವಾಗಿ ಸೋಮವಾರ ಜರುಗಿತು. ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಅವರು ಈ ಆಯ್ಕೆ ಪ್ರಕ್ರಿಯೆಯ ನಿಯಂತ್ರಣಾಧಿಕಾರಿಯಾಗಿದ್ದರು.
ಸ್ಥಾಯೀ ಸಮಿತಿ ಸದಸ್ಯರು: ಹಣಕಾಸು-ಜಾಸ್ಮಿನ್ ಕಬೀರ್ ಚೆರ್ಕಳಂ (ಮಹಿಳಾ ಸದಸ್ಯೆ), ಕಮಲಾಕ್ಷಿ, ಜಮೀಲಾ ಸಿದ್ದೀಖ್, ಅಭಿವೃದ್ಧಿ-ಗೀತಾಕೃಷ್ಣನ್ (ಮಹಿಳಾ ಸದಸ್ಯೆ), ನಾರಾಯಣ ನಾಯ್ಕ್, ಪಿ.ಬಿ.ಷಫೀಕ್, ಲೋಕೋಪಯೋಗಿ-ಕೆ.ಶಕುಂತಲಾ (ಮಹಿಳಾ ಸದಸ್ಯೆ), ಗೋಲ್ಡನ್ ಅಬ್ದುಲ್ ಖಾದರ್, ಸಿ.ಜೆ.ಸಜಿತ್, ಆರೋಗ್ಯ-ಶಿಕ್ಷಣ-ನ್ಯಾಯವಾದಿ ಸರಿತಾ ಎಸ್.ಎನ್.(ಮಹಿಳಾ ಸದಸ್ಯೆ), ಜೋಮೋನ್ ಜೋಸ್, ಫಾತಿಮತ್ ಷಂನಾ ಸಿ.ಎಚ್., ಕಲ್ಯಾಣ-ಎಂ.ಶೈಲಜಾ ಭಟ್(ಮಹಿಳಾ ಸದಸ್ಯೆ), ಎ.ಮನು, ಷಿನೋಜ್ ಚಾಕೋ.
ಮೊದಲು ಮಹಿಳಾ ಸದಸ್ಯೆಯರ ಆಯ್ಕೆ, ನಂತರ ಸಾರ್ವಜನಿಕ ವಿಭಾಗದ ಸದಸ್ಯರ ಆಯ್ಕೆ ನಡೆಯಿತು. ಸ್ಥಾಯೀ ಸಮಿತಿ ಅಧ್ಯಕ್ಷರುಗಳ ಆಯ್ಕೆ ಜ.14ರಂದು ನಡೆಯಲಿದೆ.