ಕಾಸರಗೋಡು:ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿ ಅಭಿವೃದ್ಧಿಗಾಗಿ ಟೆಂಡರ್ ಪ್ರಕ್ರಿಯೆ ಪೂರ್ತಿಗೊಂಡಿದ್ದರೂ, ಕಾಮಗಾರಿ ಆರಂಭಿಸದಿರುವುದನ್ನು ವಿರೋಧಿಸಿ ಸೋಮವಾರ ನಾಗರಿಕರು ನೆಲ್ಲಿಕಟ್ಟೆಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಚೆರ್ಕಳದಿಂದ ಅಡ್ಕಸ್ಥಳ ವರೆಗೆ ಎರಡು ಪ್ರತ್ಯೇಕ ಟೆಂಡರ್ ನಡೆಸಲಾಗಿದ್ದು, ಇದರಲ್ಲಿ ಉಕ್ಕಿನಡ್ಕದಿಂದ ಅಡ್ಕಸ್ಥಳ ವರೆಗೆ ಕಾಮಗಾರಿ ಪೂರ್ತಿಗೊಂಡಿದೆ. ಉಕ್ಕಿನಡ್ಕದಿಂದ ಚೆರ್ಕಳ ವರೆಗಿನ ರಸ್ತೆಗೆ ಚರ್ಲಡ್ಕ ವರೆಗೆ ಪ್ರಥಮ ಹಂತದ ಡಾಂಬರೀಕರಣ ನಡೆಸಿದ್ದು, ಅಲ್ಲಿಂದ ಮುಂದೆ ಚೆರ್ಕಳ ವರೆಗೆ ರಸ್ತೆ ಸಂಪೂರ್ಣ ಶಿಥಿಲಗೊಂಡಿದೆ.
ರಸ್ತೆ ದುರಸ್ತಿಗೆ ಆಗ್ರಹಿಸಿ ನಾಗರಿಕರು ಕ್ರಿಯಾ ಸಮಿತಿ ರಚಿಸಿ ಹೋರಾಟಕ್ಕೆ ಮುಂದಾಗಿದ್ದಾರೆ.ಬದಿಯಡ್ಕದಿಂದ ಕಾಸರಗೋಡಿಗೆ ತೆರಳುವ ಪ್ರಮುಖ ರಸ್ತೆ ಇದಾಘಿದ್ದು, ಪ್ರಸಕ್ತ ವಾಹನ ಸಂಚಾರ ದುರಸ್ತರವಾಗಿದೆ. ಪ್ರತಿಭಟನೆಗೆ ಮಾಹಿನ್ ಕೇಲೋಟ್, ಪುರುಷೋತ್ತಮನ್ ನಾಯರ್, ಅಬ್ದುಲ್ಲಕುಞÂ, ನಾಸರ್ ಕಾಟುಕೊಚ್ಚಿ ಮುಂತಾದವರು ನೇತೃತ್ವ ನೀಡಿದರು. ರಸ್ತೆಯಲ್ಲಿ ಮಲಗಿ ಅರ್ಧ ತಾಸುಗಳ ಕಾಲ ವಾಹನ ಸಂಚಾರಕ್ಕೆ ತಡೆಯೊಡ್ಡಲಾಗಿತ್ತು.
ಚೆರ್ಕಳದಿಂದ ಅಡ್ಕಸ್ಥಳ ವರೆಗಿನ 30 ಕಿ.ಮೀ ದೂರದ ರಸ್ತೆಯನ್ನು ಅಗಲಗೊಳಿಸಿ, ಮೆಕ್ಕಡಾಂ ಡಾಂಬರೀಕರಣ ನಡೆಸುವ ನಿಟ್ಟಿನಲ್ಲಿ 64.15ಕೋಟಿ ರೂ. ಮಂಜೂರುಗೊಳಿಸಲಾಗಿದೆ. ಚೆರ್ಕಳದಿಂದ ಉಕ್ಕಿನಡ್ಕ ವರೆಗಿನ 20ಕಿ.ಮೀ ರಸ್ತೆ ಹಾಗೂ ಉಕ್ಕಿನಡ್ಕದಿಂದ ಅಡ್ಕಸ್ಥಳ ವರೆಗಿನ ಹತ್ತು ಕಿ.ಮೀ ರಸ್ತೆ ಅಭಿವೃದ್ಧಿಗೆ ಎರಡು ಪ್ರತ್ಯೇಕ ಟೆಂಡರ್ ನಡೆಸಲಾಗಿದ್ದು, ಎರಡೂ ಕೆಲಸಗಳೂ ಏಕ ಕಾಲಕ್ಕೆ ಆರಂಭಿಸಲಾಗಿತ್ತು. ಚೆರ್ಕಳದಿಂದ ಉಕ್ಕಿನಡ್ಕ ವರೆಗೆ 39.76ಕೋಟಿ, ಉಕ್ಕಿನಡ್ಕದಿಂದ ಅಡ್ಕಸ್ಥಳ ವರೆಗೆ 27.39ಕೋಟಿ ರೂ. ಮೀಸಲಿರಿಸಲಾಗಿದೆ.