ಕೋಝಿಕೋಡ್: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಸರಗೋಡು ಜಿಲ್ಲೆಯ ಒಟ್ಟು ಐದು ಸ್ಥಾನಗಳಲ್ಲಿ ಎಲ್‌ಡಿಎಫ್ ಮೂರು ಸ್ಥಾನಗಳನ್ನು ಗೆಲ್ಲಲಿದೆ ಎಂಬ ಅಂಕಿಅಂಶಗಳ ಬಿಡುಗಡೆಯೊಂದಿಗೆ, ಜಿಲ್ಲೆಯಲ್ಲಿ ಹೆಚ್ಚು ಸಕ್ರಿಯವಾಗಿರಲು ಲೀಗ್ ಮತ್ತು ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಲಾಗಿದೆ ಎನ್ನಲಾಗುತ್ತಿದೆ. ಸ್ಥಳೀಯ ಚುನಾವಣೆಗಳಲ್ಲಿ ಒಟ್ಟು ಮತಗಳ ಸಂಖ್ಯೆಗಳ ಲೆಕ್ಕಾಚಾರಗಳಂತೆ ಎಲ್ಡಿಎಫ್ ಬಲಗೊಂಡಿದೆ ಎಂಬ ವಾದವು ಯುಡಿಎಫ್ ಗೆ ಕಳವಳಕ್ಕೆ ಕಾರಣವಾಗಿದೆ .
ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮಾದರಿಯಂತೆ ವಿಧಾನಸಭಾ ಚುನಾವಣೆಯ ಫಲಿತಾಂಶ ಇರದು ಎಂದು ಯುಡಿಎಫ್ ಇನ್ನೊಂದೆಡೆ ತರ್ಕಿಸುತ್ತಿದೆ. ಪ್ರಸ್ತುತ ಕಾಞಂಗಾಡ್, ಉದುಮ ಮತ್ತು ತ್ರಿಕ್ಕರಿಪುರ ಕ್ಷೇತ್ರಗಳು ಎಲ್‌ಡಿಎಫ್ ಮತ್ತು ಕಾಸರಗೋಡು ಮತ್ತು ಮಂಜೇಶ್ವರ ಕ್ಷೇತ್ರಗಳು ಯುಡಿಎಫ್‌ನೊಂದಿಗೆ ಇವೆ.
ಫ್ಯಾಷನ್ ಗೋಲ್ಡ್ ಹಗರಣಕ್ಕೆ ಸಂಬಂಧಿಸಿದಂತೆ ಎಂಸಿ ಕಮರುದ್ದೀನ್ ಜೈಲಿನಲ್ಲಿದ್ದಾರೆ. ಆದರೂ ಕ್ಷೇತ್ರದ ಪ್ರಬಲ ಲೀಗ್ ಭದ್ರಕೋಟೆಗಳನ್ನು ಭೇದಿಸಲು ಎಡಪಂಥೀಯರಿಗೆ ಸಾಧ್ಯವಾಗಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಲೀಗ್‌ನ ಪಿಬಿ ಅಬ್ದುಲ್ ರಜಾಕ್ ಅವರು 89 ಮತಗಳಿಂದ ಬಿಜೆಪಿಯ ಕೆ ಸುರೇಂದ್ರನ್ ಅವರನ್ನು ಪರಾಭವಗೊಳಿಸಿದ್ದರು. ಸಿಪಿಎಂನ ಸಿ.ಎಚ್.ಕುಂಞಂಬು ಮೂರನೇ ಸ್ಥಾನ ಪಡೆದಿದ್ದರು.
2019 ರ ವಿಧಾನಸಭೆ ಉಪಚುನಾವಣೆಯಲ್ಲಿ ಎಂಸಿ ಕಮರುದ್ದೀನ್ 7923 ಮತಗಳಿಂದ ಜಯಗಳಿಸಿದ್ದರು. ಆಗ ಎರಡನೇ ಸ್ಥಾನದಲ್ಲಿದ್ದ ಬಿಜೆಪಿಗೆ ಉಪಚುನಾವಣೆಯಲ್ಲಿ ನಿರೀಕ್ಷಿತ ಮತಗಳು ಲಭ್ಯವಾಗಿಲ್ಲ. ಈ ಬಾರಿ ಕಮರುದ್ದೀನ್ ಅವರ ಸ್ಥಾನಕ್ಕೆ ಯುವ ನಾಯಕ ಎಂ.ಕೆ.ಎಂ.ಅಶ್ರಫ್ ನೇಮಕಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಫ್ಯಾಶನ್ ಗೋಲ್ಡ್ ಹಗರಣದಲ್ಲಿ ಲೀಗ್ ವಿರುದ್ದ ಕೆಟ್ಟ ಪ್ರಚಾರದ ಹೊರತಾಗಿಯೂ, ಇದು ಮಂಜೇಶ್ವರದಲ್ಲಿ ಯಾವ ಪರಿಣಾಮವೂ ಬೀರಿಲ್ಲ ಎಂದು ಅಂಕಿಅಂಶಗಳು ತೋರಿಸುತ್ತವೆ.
ಕಾಸರಗೋಡು ಶಾಸಕ ಎನ್‌ಎ ನೆಲ್ಲಿಕುನ್ನು ಈ ಬಾರಿಯೂ ಲೀಗ್ ಪ್ರತಿನಿಧಿಸಲಿದ್ದಾರೆ. 2011 ಮತ್ತು 2016 ರಲ್ಲಿ ನೆಲ್ಲಿಕುನ್ನು ಇಲ್ಲಿಂದ ವಿಜೇತರಾಗಿದ್ದರು.
ಎಡರಂಗದಲ್ಲಿ ಮತ್ತೆ ಐಎನ್‌ಎಲ್‌ಗೆ ಸ್ಥಾನ ಲಭ್ಯವಾಗಲಿದೆ. ಅಜೀಜ್ ಕಡಪ್ಪುರ ಇಲ್ಲಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಕಾಞಂಗಾಡ್ ಸಿಪಿಐಯ ನಿಯೋಜಿತ ಸ್ಥಾನವಾಗಿದೆ. ಸಚಿವ ಇ ಚಂದ್ರಶೇಖರನ್ ಈ ಬಾರಿ ಸ್ಪರ್ಧಿಸಲಿದ್ದಾರೆಯೇ ಎಂಬುದು ಖಚಿತವಾಗಿಲ್ಲ. ಪಕ್ಷದ ಮಾನದಂಡಗಳ ಪ್ರಕಾರ ಅವರಿಗೆ ಸ್ಥಾನ ನೀಡದಿದ್ದರೆ, ಅದು ಹೊಸಬರಿಗೆ ಅವಕಾಶವಾಗಲಿದೆ.
ಕಳೆದ ಬಾರಿ ಇ ಚಂದ್ರಶೇಖರನ್ 26011 ಮತಗಳಿಂದ ಜಯಗಳಿಸಿದ್ದರು. ಇಲ್ಲಿನ ಬಿಕ್ಕಟ್ಟು ಏನೆಂದರೆ ಕಾಂಗ್ರೆಸ್ ನಲ್ಲಿ ಮಾಸ್ ಲೀಡರ್ ಶಿಫ್ ಅಭ್ಯರ್ಥಿಯ ಕೊರತೆಯಾಗಿದೆ.. ಇಲ್ಲಿ ಮಾತ್ರವಲ್ಲ ಉದುಮಾದಲ್ಲಿಯೂ ಸಹ. ಉದುಮಾದಲ್ಲಿ ಕಳೆದ ಬಾರಿ ಕೆ ಸುಧಾಕರನ್ 3882 ಮತಗಳಿಂದ ಸಿಪಿಎಂನ ಕೆ ಕುಂಞ್ ರಾಮನ್ ವಿರುದ್ಧ ಸೋತಿದ್ದರು.
ಕೆ ಸುಧಾಕರನ್ ಅವರು ಸಿಪಿಎಂ ನಿಯಮಿತವಾಗಿ ಗೆಲ್ಲುವ ಕ್ಷೇತ್ರದಿಂದ ಸ್ಪರ್ಧಿಸುವ ಸಾಮರ್ಥ್ಯ ಹೊಂದಿರುವರೆಂದೇ ಲೆಕ್ಕಾಚಾರವಾಗಿತ್ತು.
ಈ ಬಾರಿ ಎಪಿ ಅಬ್ದುಲ್ಲಕುಟ್ಟಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ. ತ್ರಿಕ್ಕರಿಪುರ ಇನ್ನೂ ಬಲವಾದ ಎಡ ಭದ್ರಕೋಟೆಯಾಗಿದೆ. ಸಿಪಿಎಂನ ಎಂ.ರಾಜಗೋಪಾಲ್ 16959 ಮತಗಳ ಅಂತರದಿಂದ ಜಯಗಳಿಸಿದ್ದ ಸ್ಥಾನದಲ್ಲಿ ಕಾಂಗ್ರೆಸ್ಸ್ ಗೆ ಅಷ್ಟೊಂದು ಸ್ಪರ್ಧೆ ನೀಡಲು ಸಾಧ್ಯವಾಗಿರಲಿಲ್ಲ.