HEALTH TIPS

ಸೌದಿ-ಖತರ್ ವಿಮಾನಯಾನ ಇಂದಿನಿಂದ ಪುನರಾರಂಭ

          ದುಬೈ: ತಮ್ಮ ನಡುವಿನ ಮೂರು ವರ್ಷಗಳ ರಾಜತಾಂತ್ರಿಕ ವಿರಸಕ್ಕೆ ಅಂತ್ಯಹಾಡುವ ಪ್ರಯತ್ನಗಳ ಭಾಗವಾಗಿ ಖತರ್ ಹಾಗೂ ಸೌದಿ ಆರೇಬಿಯ ಇಂದಿನಿಂದ ತಮ್ಮ ವಾಯುಕ್ಷೇತ್ರಗಳನ್ನು ಉಭಯದೇಶಗಳ ವಿಮಾನಗಳ ಹಾರಾಟಕ್ಕೆ ತೆರೆದಿಡಲಿವೆ. ಖತರ್ ಏರ್‌ವೇಸ್ ಹಾಗೂ ಸೌದಿ ಏರ್‌ಲೈನ್ಸ್‌ನ ವಿಮಾನಗಳು ದೋಹಾ ಹಾಗೂ ರಿಯಾದ್ ನಡುವೆ ಸೋಮವಾರದಿಂದ ವಿಮಾನ ಹಾರಾಟವನ್ನು ಪುನಾರಂಭಿಸುವುದಾಗಿ ಅವು ಘೋಷಿಸಿವೆ.

        ಇಂದಿನಿಂದ   ರಿಯಾದ್‌ಗೆ ಜನವರಿ 14ರಂದು ಜಿದ್ದಾ ಹಾಗೂ ಜನವರಿ 16ರಂದು ದಮ್ಮಾಮ್‌ಗೆ ವಿಮಾನ ಹಾರಾಟಗಳು ಪುನಾರಂಭಗೊಳ್ಳಲಿದೆಯೆಂದು ಖತರ್ ಏರ್‌ವೇಸ್ ಶನಿವಾರ ಟ್ವೀಟ್ ಮಾಡಿದೆ. ಬೋಯಿಂಗ್770-300, ಬೋಯಿಂಗ್787-8 ಹಾಗೂ ಏರ್‌ಬಸ್ ಎ350 ವಿಮಾನಗಳು ಹಾರಾಟ ನಡೆಸಲಿವೆಯೆಂದು ಅದು ಹೇಳಿದೆ.

           ಸೌದಿ ಆರೇಬಿಯ ಸಾಮ್ರಾಜ್ಯ ಹಾಗೂ ಆ ದೇಶದಲ್ಲಿರುವ ಪ್ರಮುಖ ವಿಮಾನನಿಲ್ದಾಣಗಳ ಜೊತೆ ನಮ್ಮ ವಾಣಿಜ್ಯ ಹಾಗೂ ಕಾರ್ಗೊ ಪಾಲುದಾರರ ಜೊತೆ ಗಾಢವಾದ ಬಾಂಧವ್ಯವನ್ನು ಪುನಾರಂಭಿಸುವುದನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಖತರ್ ಏರ್‌ವೇಸ್ ಟ್ವೀಟಿಸಿದೆ.

ಸೌದಿ ಆರೇಬಿಯ ಕೂಡಾ ಈ ಬಗ್ಗೆ ಟ್ವೀಟ್ ಮಾಡಿದ್ದು, ಸೋಮವಾರದಿಂದ ದೋಹಾ ಹಾಗೂ ಜಿದ್ದಾ ನಡುವೆ ವಿಮಾನ ಹಾರಾಟಗಳು ಪುನಾರಂಭಗೊಳ್ಳಲಿರುವುದಾಗಿ ತಿಳಿಸಿದೆ.

      ಖತರ್ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆಯೆಂದು ಆರೋಪಿಸಿ ಅದರ ವಿರುದ್ಧ ಸೌದಿ ಆರೇಬಿಯ, ಯುಎಇ, ಬಹರೈನ್ ಹಾಗೂ ಈಜಿಪ್ಟ್, ರಾಜತಾಂತ್ರಿಕ, ವಾಣಿಜ್ಯ ಹಾಗೂ ಪ್ರಯಾಣ ನಿರ್ಬಂಧಗಳನ್ನು ಹೇರಿದ್ದವು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries