ಮಂಜೇಶ್ವರ: ನವಯುಗ ಉಡುಪಿ ಟೋಲ್ ವೇ ಪ್ರೈವೇಟ್ ಲಿಮಿಟೆಡ್ ತಲಪಾಡಿ ಇಲ್ಲಿನ ಕಾರ್ಮಿಕರು 72ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಮಂಗಳವಾರ ಬೆಳಗ್ಗೆ ಧ್ವಜಾರೋಹಣಗೈಯುವ ಮೂಲಕ ಸಂಭ್ರಮದಿಂದ ಆಚರಿಸಿದರು. ಉಳ್ಳಾಲ ಠಾಣಾ ಪೋಲೀಸ್ ಸಿಬ್ಬಂದಿ ಕೆ. ಎನ್. ಸದಾಶಿವ ಧ್ವಜಾರೋಹಣಗೈದು ಮಾತನಾಡಿದರು. ತಲಪಾಡಿ ಟೋಲ್ ನ ಪ್ರಬಂಧಕ ಶಿವಪ್ರಸಾದ್ ರೈ ಅಧ್ಯಕ್ಷತೆ ವಹಿಸಿದ್ದರು. ಟೋಲ್ ನ ಸಿಆರ್‍ಒ ರಾಜೇಶ್ ಸ್ವಾಗತಿಸಿ, ಎಚ್ ಆರ್ ಸುನೀತ ವಂದಿಸಿದರು. ಈ ವೇಳೆ ಟೋಲ್ ನ ಎಪಿಎಂ ಕೃಷ್ಣ, ಪಿಆರ್‍ಒ ಭಾಸ್ಕರ್ ತಲಪಾಡಿ, ಹಿರಿಯ ಟೋಲ್ ಸಿಬ್ಬಂದಿ ಸೀತಾರಾಮ್, ತಲಪಾಡಿ ಪಂಚಾಯತಿ ಸದಸ್ಯೆ ಅಕ್ಷತಾ ಉಪಸ್ಥಿತರಿದ್ದರು. ಶಿಫ್ಟ್ ಇಂಚಾರ್ಜ್ ಆನಂದ ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ಸಿಹಿತಿಂಡಿ ವಿತರಿಸಲಾಯಿತು.