ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಮಕರ ಸಂಕ್ರಮಣದ ಪ್ರಯುಕ್ತ ನಡೆದ ವಿಶೇಷ ಬಲಿವಾಡು ಕೂಟದ ಸಂದರ್ಭದಲ್ಲಿ ಶಿವಾನಂದ ಉಪ್ಪಳ ಮತ್ತು ಬಳಗದವರಿಂದ ಭಜನಾ ಸಂಕೀರ್ತನೆ ನಡೆಯಿತು. ಹಾರ್ಮೋನಿಯಂ ನಲ್ಲಿ ಶಿವಾನಂದ ಉಪ್ಪಳ, ತಬಲಾದಲ್ಲಿ ಸ್ವರಾಜ್ ಎಂ.ಎಸ್ ಹಾಗೂ ಎಳೆಯ ಪ್ರತಿಭೆ ಸುಶಾಂತ್ ಕುಂಟಿಕಾನ, ಹಾಗೂ ಹಾಡುಗಾರಿಕೆಯಲ್ಲಿ ಜಗದೀಶ್ ಎಂ.ಎಸ್, ರಾಮ.ಎಂ ಮಂಗಲ್ಪಾಡಿ, ಮನೋಜ್ ಪಿ ಹಾಗೂ ಶಿವಕುಮಾರ್ ಪುಳಿಕುತ್ತಿ ಉತ್ತಮವಾಗಿ ಸಹಕರಿಸಿದರು.
ತಂಡದ ನೇತೃತ್ವ ವಹಿಸಿದ್ದಲ್ಲದೆ ಉತ್ತಮ ಹಾಡುಗಾರರಾಗಿಯೂ, ಕಲಾಭಿಮಾನಿಗಳ ಮನರಂಜಿಸಿದ ಶಿವಾನಂದ ಉಪ್ಪಳ ಇವರು ಪಕ್ಕವಾದ್ಯ ಗುರುಗಳಾಗಿ ನಾಡಿನಾದ್ಯಂತ ನೂರಾರು ಕಲಾಪ್ರತಿಭೆಗಳನ್ನು ಬೆಳಕಿಗೆ ತಂದವರು. ಶ್ರೀಯುತರನ್ನು ಗೌರವ ಸೂಚಕವಾಗಿ ಕ್ಷೇತ್ರದ ವತಿಯಿಂದ ನ್ಯಾಯವಾದಿ. ಮಿಂಚಿನಡ್ಕ ಮಹಾಭಲ ಭಟ್ ಇವರ ಸಮ್ಮುಖದಲ್ಲಿ ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.