ಕಾಸರಗೋಡು: ಕಾಸರಗೋಡು ಜಿಲ್ಲೆಯ ಸರ್ಕಾರಿ ಕಚೇರಿಗಳು ಹಸುರು ಕೇಂದ್ರಗಳಾಗಿ ಬದಲಾಗಲಿವೆ. ಹಸುರು ಸಂಹಿತೆ ಪಾಲಿಸುವ ಮೂಲಕ ಕಚೇರಿಗಳಲ್ಲಿ ಹೆಚ್ಚುವರಿ ಬದಲಾವಣೆ ತರುವುದು ಇಲ್ಲಿನ ಉದ್ದೇಶ.
ಹರಿತ ಕೇರಳಂ ಮಿಷನ್ ಮತ್ತು ಶುಚಿತ್ವ ಮಿಷನ್ ಜಂಟಿಯಾಗಿ ಕಾಸರಗೋಡು ಜಿಲ್ಲೆಯ ಸರಕಾರಿ ಕಚೇರಿಗಳಿಗೆ ಮತ್ತು ಶಿಕ್ಷಣಾಲಯಗಳಿಗೆ ಹಸುರು ಕಚೇರಿಗಳು ಎಂಬ ನೆಗಳ್ತೆ ನೀಡಲು ನಿರ್ಧರಿಸಿವೆ. 5 ಮಂದಿ ಸದಸ್ಯರಿರುವ ಮೂರು ತಂಡಗಳು ಜ.11ರಿಂದ ಜಿಲ್ಲಾ ಮಟ್ಟದ ಕಚೇರಿಗಳು, ಬ್ಲೋಕ್ ಕಚೇರಿಗಳು, ತಾಲೂಕು ಕಚೇರಿಗಳು ಈ ಕಡೆಗಳಲ್ಲಿ ಹಸುರು ಸಂಹಿತೆ ಚಟುವಟಿಕೆಗಳ ಅವಲೋಕನ ನಡೆಸಿ ಗ್ರೀನ್ ಆಪೀಸ್ ಸರ್ಟಿಫಿಕೆಟ್ ನೀಡಲಿವೆ.
ಬ್ಲೋಕ್ ಪಂಚಾಯತ್, ಗ್ರಾಮ ಪಂಚಾಯತ್, ನಗರಸಭೆಗಳ ವ್ಯಾಪ್ತಿಯ ಕಚೇರಿಗಳ, ವಿದ್ಯಾಲಯಗಳ ಅವಲೋಕನ ನಡೆಸಲು ಅಗತ್ಯವಿರುವ 5 ಮಂದಿ ಸದಸ್ಯರ ತಂಡ ರಚಿಸಲಾಗುವುದು. ಅವರು 18ರಿಂದ ಗ್ರಡೇಷನ್ ಚಟುವಟಿಕೆಗಳನ್ನು ಆರಂಭಿಸಲಿದ್ದಾರೆ. 22 ಮಂದಿಯ ತಪಾಸಣೆಯಲ್ಲಿ ಒಟ್ಟು 100 ಅಂಕಗಳಲ್ಲಿ 90-100 ಅಂಕ ಗಳಿಸುವ ಕಚೇರಿಗಳಿಗೆ "ಎ"ಶ್ರೇಣಿ, 80-89 ಅಂಕಗಳಿಸುವ ಸ್ಥಳೀಯಾಡಳಿತ ಸಂಸ್ಥೆಗಳಿಗೆ "ಬಿ"ಶ್ರೇಣಿ, 70-79 ಅಂಕಗಳಿಸುವ ಸಂಸ್ಥೆಗೆ "ಸಿ" ಗ್ರೇಡ್ ನೀಡಲಾಗುವುದು.
"ಎ"ಗ್ರೇಡ್ ಲಭಿಸುವ ಕಾಸರಗೋಡು ಜಿಲ್ಲೆಯ ಸ್ಥಲೀಯಾಡಳಿತ ಸಂಸ್ಥೆಗಳ ಮೊದಲ ಮೂರು ಕಚೇರಿಗಳಿಗೆ ಪ್ರಶಸ್ತಿ ನೀಡಲಾಗುವುದು. ಜ.26ರಿಂದ ರಾಜ್ಯ ಮಟ್ಟದಲ್ಲಿಯೂ, ಜಿಲ್ಲಾ ಮಟ್ಟದಲ್ಲಿಯೂ ಹರಿತ ಕಚೇರಿ ಎಂಬ ಘೋಷಣೆ ನಡೆಸಲಾಗುವುದು. ಸ್ಥಲೀಯಾಡಳಿತ ಆಡಳಿತೆ ಮಟ್ಟದಲ್ಲಿ ಆಯಾ ಕಚೇರಿಗಳಲ್ಲಿ ಜನಪ್ರತಿನಿಧಿಗಳು ಅರ್ಹತಾಪತ್ರ ವಿತರಣೆ ನಡೆಸುವರು.
ತಪಾಸಣೆಯ ಹಂತಗಳು
1. ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ನಿಷೇಧ.
2. ತೊಳೆದು ಮರಳಿ ಬಳಸುವ ಪಾತ್ರೆಗಳಲ್ಲಿ ಆಹಾರಮ ನೀರು ಜತೆಗೆ ತರುವ ಸಿಬ್ಬಂದಿಯ ಸಂಖ್ಯೆ.
3. ಜೈವಿಕ-ಅಜೈವಿಕ ತ್ಯಾಜ್ಯಗಳನ್ನು ವಿಂಗಡಿಸಿ ಸಂಗ್ರಹಿಸುವ ಪ್ರತ್ಯೇಕ ಕಸದತೊಟ್ಟಿ ಸ್ಥಾಫಿಸಲಾಗಿರುವುದು.
4. ಈ ಕಸದು ತೊಟ್ಟಿಗಳಲ್ಲಿ ಇದೇ ರೀತಿ ತ್ಯಾಜ್ಯ ಸಂಗ್ರಹಿಸುತ್ತಿರುವುದು.
5. ಇ-ತ್ಯಾಜ್ಯ, ಬಳಕೆಯಿಲ್ಲದ ಪೀಠೋಕರಣಗಳು ಇತ್ಯಾದಿಗಳ ತೆರವು.
6. ದ್ರವ-ತ್ಯಾಜ್ಯ ಸಂಸ್ಕರಣೆ ವ್ಯವಸ್ಥೆ.
7. ಶುಚೀಕರಣ ನಡೆಸಲಾದ ಶೌಚಾಲಯಗಳು.
8. ಸೂಚನಾ ಫಲಕಗಳು.