HEALTH TIPS

ಮಾಸ್ಟರ್ ಯೋಜನೆಯ ಜೊತೆಗೆ ಇನ್ನು ಮುಂದೆ ಹೆಗಲು ನೀಡುವರು ಮಕ್ಕಳು : ಶಾಲೆಗಳಲ್ಲಿ ಜಾರಿಗೆ ಬರಲಿದೆ "ಕಾಲ್ ಎಟ್ ಸ್ಕೂಲ್"

                     

      ಕಾಸರಗೋಡು: ಸಾರ್ವಜನಿಕ ವಲಯದಲ್ಲಿ ಕೋವಿಡ್ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತೆ ರಚಿಸಿರುವ ಮಾಸ್ಟರ್ ಯೋಜನೆಯ ಜೊತೆಯಲ್ಲೇ ಶಾಲಾ ಕಾಲೇಜುಗಳಲ್ಲಿ ಪ್ರತ್ಯೇಕ ಸ್ಟೂಡೆಂಟ್ ಕೋವಿಡ್ ಸೆಲ್ ಗಳು "ಕಾಲ್ ಎಟ್ ಸ್ಕೂಲ್" ಎಂಬ ಹೆಸರಲ್ಲಿ ರಚನೆಗೊಳ್ಳಲಿದೆ. ಜಿಲ್ಲೆಯ ಎಲ್ಲ ಶಿಕ್ಷಣಾಲಯಗಳಲ್ಲೂ ವಿದ್ಯಾರ್ಥಿಗಳ ಕೋವಿಡ್ ಪ್ರತಿರೋಧ ಚಟುವಟಿಕೆಗಳನ್ನು ಏಕೀಕೃತಗೊಳಿಸಲಾಗುವುದು. ಆಯ್ದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಆಯಾ ಶಿಕ್ಷಣಾಲಯಗಳಲ್ಲಿ ಕೋವಿಡ್ ಪ್ರತಿರೋಧ ಕಟ್ಟು ನಿಟ್ಟುಗಳು ಸೂಕ್ತ ರೀತಿಯಲ್ಲೇ ಪಾಲನೆಗೊಳ್ಳುತ್ತಿವೆಯೇ ಎಂಬ ಬಗ್ಗೆ ಖಚಿತತೆ ಮೂಡಿಸಲಾಗುವುದು. ಶಾಲೆಗಳಲ್ಲಿ ಪ್ರತ್ಯೇಕ ಪ್ಲಡ್ಜ್ ಕ್ಯಾಂಪಯಿನ್ ಆರಂಭಿಸಲಾಗುವುದು. 

              ಮಾಸ್ಟರ್ ಯೋಜನೆಯ ಅತ್ಯುತ್ತಮ ಶಿಕ್ಷಕರಿಗೆ ಗುಡ್ ಸರ್ವೀಸ್ ಎಂಟ್ರಿ:

    ಮಾಸ್ಟರ್ ಯೋಜನೆಯಲ್ಲಿ ಅತ್ಯುತ್ತಮ ಚಟುವಟಿಕೆ ನಡೆಸಿರುವ ಶಿಕ್ಷಕರಿಗೆ ಗುಡ್ ಸರ್ವೀಸ್ ಎಂಟ್ರಿ ನೀಡಿಕೆ ಯೋಜನೆಯನ್ನು ಮುಂದುವರಿಸಲಾಗುವುದು. ನೇಮಕಗೊಂಡಿರುವ ವಾರ್ಡ್ ನಲ್ಲಿ ಸತತ 14 ದಿನಗಳ ಕಾಲ ಕೋವಿಡ್ ರೋಗಿಗಳ ಸಂಖ್ಯೆ ಸೊನ್ನೆಯಾಗಿ, ನಂತರದ 14 ದಿನಗಳ ಕಾಲ ರೋಗಿಗಳೇ ಇಲ್ಲದೇ ಇದ್ದರೆ ಅಂಥಾ ಶಿಕ್ಷಕರಿಗೆ 10 ಅಂಕ ಲಭಿಸಲಿದೆ. ಇದೇ ರೀತಿ 100 ಅಂಕ ಪಡೆದ ವಾರ್ಡ್ ಗಳ ಕರ್ತವ್ಯ ಹೊಂದಿರುವ ಶಿಕ್ಷಕರನ್ನು ಗುಡ್ ಸರ್ವೀಸ್ ಎಂಟ್ರಿಗೆ ಪರಿಶೀಲನೆ ನಡೆಸಲಾಗುವುದು. ಈ ನಿಟ್ಟಿನಲ್ಲಿ ಪ್ರತಿ ಶಿಕ್ಷಕರ ಚಟುವಟಿಕೆಗಳನ್ನು ಜಿಲ್ಲಾ ಮಟ್ಟದಲ್ಲಿ ಸಂಗ್ರಹಿಸಿ ವರದಿ ಸಿದ್ಧಪಡಿಸಲಾಗುವುದು. ಮಾಸ್ಟರ್ ಯೋಜನೆಯ ಶಿಕ್ಷಕರಲ್ಲದೆ ವಾರ್ಡ್ ಮಟ್ಟದ ಜಾಗೃತಿ ಸಮಿತಿಗಳ ಚಟುವಟಿಕೆಗಳಲ್ಲಿ ಅತ್ಯುತ್ತಮ ಕ್ರಮ ನಡೆಸಿದವರಿಗೆ ಬಹುಮಾನ ನೀಡಲಾಗುವುದು. 

         ಕರಾವಳಿ ಪ್ರದೇಶಗಳಲ್ಲೂ, ಪ್ರವಾಸಿ ತಾಣಗಳಲ್ಲೂ ವಿಶೇಷ ಜಾಗೃತಿ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಿನಿಮಾ ಮಂದಿರಗಳಲ್ಲಿ ಕೋವಿಡ್ ಕಟ್ಟುನಿಟ್ಟು ಕಡ್ಡಾಯವಾಗಿ ಪಾಲಿಸಬೇಕು. ಮರೆಯದಿರಿ ಪ್ರತಿರೋಧ ವಾಕ್ಸಿನ್ ಎಂಬುದು ಕೋವಿಡ್ ಚಿಕಿತ್ಸೆಗೆ ಬಳಸುವ ಔಷಧವಲ್ಲ. ಅನ್ನದಾನ, ಪಾಯಸ ವಿತರಣೆ ಇತ್ಯಾದಿ ಚಟುವಟಕೆಗಳನ್ನು ಸಾರ್ವಜನಿಕವಾಗಿ ನಡೆಸದೇ ಅವನ್ನು ಮನೆಗಳಿಗೆ ತಲಪಿಸುವ ನಿಟ್ಟಿನಲ್ಲಿ ಆಯಾ ಸಂಘ-ಸಂಸ್ಥೆಗಳು ಸಿದ್ಧರಾಗಬೇಕು. ಸರಕಾರಿ ಕಚೇರಿಗಳ ಗೋಡೆ, ಆವರಣಗೋಡೆಗಳನ್ನು ಶುಚಿಯಾಗಿ ಬಣ್ಣಬಳಿದು ಅವುಗಳಲ್ಲಿ ಕೋವಿಡ್ ವಿರುದ್ಧ ಜನಜಾಗೃತಿ ಸಂದೇಶ ಬರೆಯಬೇಕು. ಎಲ್ಲ ಸರಕಾರಿ ಕಚೇರಿಗಳಲ್ಲೂ ಕೋವಿಡ್ ಪ್ರತಿರೊಧ ಕಟ್ಟುನಿಟ್ಟುಗಳ ಶಾಶ್ವತ ಫಲಕಗಳನ್ನು ಸ್ಥಾಪಿಸಬೇಕು. ಫೇಸ್ ಬುಕ್ ಲೈವ್, ರೇಡಿಯೋ , ಟಿವಿ, ಫೆÇೀನ್ ಇನ್ ಪೆÇ್ರೀಗ್ರಾಂ ಇತ್ಯಾದಿ ಕಾರ್ಯಕ್ರಮಗಳನ್ನು ಆರಂಭಿಸಬೇಕು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries