ನವದೆಹಲಿ: ಇಸ್ರೇಲ್ ರಾಯಭಾರಿ ಕಚೇರಿ ಹೊರಗಡೆ ಶುಕ್ರವಾರ ಸಂಭವಿಸಿದ ಸ್ಫೋಟ ಭಯೋತ್ಪಾದಕ ದಾಳಿ ಅಂತಾ ಅನೇಕ ಕಾರಣಗಳಿಂದ ನಂಬಲಾಗಿದೆ. ಆದರೆ, ಗುಪ್ತಚರ ಮಾಹಿತಿಯಿಂದಾಗಿ ಕಳೆದ ಕೆಲ ವಾರಗಳಿಂದಲೂ ಮುಂಜಾಗ್ರತೆ ವಹಿಸಿದ್ದರಿಂದ ಈ ಘಟನೆ ನಮಗೆ ಅಶ್ಚರ್ಯವನ್ನುಂಟು ಮಾಡಿಲ್ಲ ಎಂದು ಭಾರತದಲ್ಲಿನ ಇಸ್ರೇಲ್ ರಾಯಭಾರಿ ರಾನ್ ಮಾಲ್ಕಾ ಹೇಳಿದ್ದಾರೆ.
ಯಾವುದೇ ಗಮ್ಯಸ್ಥಾನದಲ್ಲಿ ಕೃತ್ಯ ಅಥವಾ ಕಾರ್ಯಾಚರಣೆ ನಡೆಸಲಾಗಿದೆಯೇ ಎಂಬುದರ ಬಗ್ಗೆ ವಿಶ್ವದ ಅನೇಕ ಕಡೆಗಳಲ್ಲಿ ಪರಿಶೀಲನೆ ನಡೆಸುತ್ತಿರುವಂತೆಯೇ, 2012ರಲ್ಲಿ ಇಸ್ರೇಲ್ ರಾಯಭಾರಿಗಳ ಮೇಲಿನ ದಾಳಿ ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಇಸ್ರೇಲ್ ರಾಯಭಾರಿ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ವಿವಿಧ ಅರಬ್ ರಾಷ್ಟ್ರಗಳಲ್ಲಿ ಇಸ್ರೇಲ್ ಶಾಂತಿ ಪ್ರಯತ್ನಕ್ಕೆ ಭಂಗ ತರುವ ಗುರಿಯೊಂದಿಗೆ ದಾಳಿ ನಡೆಯಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾನ್ ಮಾಲ್ಕಾ, ಪೂರ್ವ ಏಷ್ಯಾ ವಲಯದಲ್ಲಿ ಅಸ್ಥಿರಗೊಳಿಸಲು ಬಯಸುವವರಿಗೆ ನಮ್ಮನ್ನು ತಡೆಯಲು ಅಥವಾ ಭಯ ಹುಟ್ಟಿಸಲು ಆಗುವುದಿಲ್ಲ. ನಮ್ಮ ಶಾಂತಿ ಪ್ರಯತ್ನ ಯಾವುದೇ ಅಡ್ಡಿಯಿಲ್ಲದೆ ಮುಂದುವರೆಯಲಿದೆ. ದಾಳಿ ತನಿಖೆಗಾಗಿ ಭಾರತೀಯ ಆಡಳಿತಕ್ಕೆ ಇಸ್ರೇಲ್ ರಾಯಭಾರತ್ವದಿಂದ ಎಲ್ಲಾ ರೀತಿಯ ಮಾಹಿತಿ ನೀಡಲಾಗಿದೆ ಎಂದು ಅವರು ತಿಳಿಸಿದರು.
ಶುಕ್ರವಾರ ರಾಷ್ಟ್ರ ರಾಜಧಾನಿ ನವದೆಹಲಿಯ ಹೃದಯ ಭಾಗದಲ್ಲಿರುವ ಇಸ್ರೇಲ್ ರಾಯಭಾರಿ ಕಟೇರಿ ಬಳಿ ಲಘು ಸಾಂದ್ರತೆಯ ಸ್ಫೋಟ ಸಂಭವಿಸಿತ್ತು.ಆದರೆ, ಯಾರಿಗೂ ಅಪಾಯವಾಗಿಲ್ಲ.