HEALTH TIPS

ಪ್ರತಿಭಟನೆ ಶಾಂತವಾಗಿಯೇ ಇತ್ತು, ಹಿಂಸಾಚಾರಕ್ಕೂ ನಮಗೂ ಸಂಬಂಧವಿಲ್ಲ; ಸಮಾಜಘಾತುಕರು ಒಳನುಸುಳಿದರು"

       ನವದೆಹಲಿ: ದೆಹಲಿಯಲ್ಲಿ ರೈತರು ಆಯೋಜಿಸಿದ್ದ ಟ್ರ್ಯಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ತಿರುಗಿದ್ದು, ರಾಷ್ಟ್ರ ರಾಜಧಾನಿ ಪ್ರಕ್ಷುಬ್ಧಗೊಂಡಿದೆ. 

       ಈ ನಡುವೆ ಕೆಂಪುಕೋಟೆಯಲ್ಲಿ ಪ್ರತಿಭಟನಾ ನಿರತ ರೈತರು ಸಿಖ್ ಧ್ವಜ ಹಾರಿಸಿದ್ದಕ್ಕೆ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಕೆಲವು ಘಟನೆಗಳ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಸಂಯುಕ್ತ ಕಿಸಾನ್ ಮೋರ್ಚ ಪ್ರತಿಕ್ರಿಯೆ ನೀಡಿದ್ದು, ತಮಗೂ ಈ ಹಿಂಸಾಚಾರಕ್ಕೂ ಸಂಬಂಧವಿಲ್ಲ ಎಂದು ಹೇಳಿದೆ. 

      " ನಮ್ಮ ಪ್ರತಿಭಟನೆ ಶಾಂತಿಯುತವಾಗಿಯೇ ಇತ್ತು. ಆದರೆ ಕೆಲವು ಸಮಾಜಘಾತುಕ ಶಕ್ತಿಗಳು ನಮ್ಮ ನಡುವೆ ಸೇರಿಕೊಂಡು ಈ ಹಿಂಸಾಚಾರ ನಡೆದಿದೆ"  ಎಂದು ಸಂಯುಕ್ತ ಕಿಸಾನ್ ಮೋರ್ಚ ಹೇಳಿದೆ. 

       ಶಾಂತಿ ಎಂದಿಗೂ ಅತಿ ದೊಡ್ಡ ಶಕ್ತಿ ಹಾಗೂ ನಿಯಮಗಳ ಉಲ್ಲಂಘನೆ ಚಳುವಳಿಗೆ ಒಳಿತಲ್ಲ ಎಂಬುದು ನಮ್ಮ ಅಭಿಪ್ರಾಯವಾಗಿದೆ ಎಂದೂ ಸಂಯುಕ್ತ ಕಿಸಾನ್ ಮೋರ್ಚ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries