ಬದಿಯಡ್ಕ: ದೇಶೀಯ ಅಧ್ಯಾಪಕ ಪರಿಷತ್ ಕುಂಬಳೆ ಉಪಜಿಲ್ಲಾ ಸಮ್ಮೇಳನವು ಶನಿವಾರ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಶಾಲೆಯಲ್ಲಿ ಜರಗಿತು.
ಶಾಲಾ ವ್ಯವಸ್ಥಾಪಕ ನಾರಾಯಣ ಶರ್ಮ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎನ್‍ಟಿಯು ಅಧ್ಯಕ್ಷ ರಂಜಿತ್ ಎಂ. ಅಧ್ಯಕ್ಷತೆಯನ್ನು ವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕುಟುಂಬ ಪ್ರಭೋದನ್ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮುಖ್ಯ ಅತಿಥಿಗಳಾಗಿ ಮಾತನಾಡಿ ಉತ್ತಮ ಗುಣಮಟ್ಟದ ವಿಧ್ಯಾಭ್ಯಾಸವನ್ನು ಮಕ್ಕಳಿಗೆ ನೀಡುವುದರೊಂದಿಗೆ ದೇಶಭಕ್ತಿಯ ಚಿಂತನೆ ಮಕ್ಕಳ ಮನಸ್ಸಿನಲ್ಲಿ ಬೇರೂರಬೇಕು. ಭಾರತೀಯ ಸಂಸ್ಕøತಿಯನ್ನು ಬೆಳಗುವಂತಹ ಸಂಸ್ಕಾರಯುತವಾದ ವಿದ್ಯಾಭ್ಯಾಸದಿಂದ ರಾಮಕೃಷ್ಣರಂತೆ ನಡೆ ನುಡಿಯನ್ನು ಹೊಂದಿರುವ ಭವಿಷ್ಯದ ಪ್ರಜೆಗಳು ರೂಪುಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾಪಂಚಾಯಿತಿ ಸದಸ್ಯೆ ಶೈಲಜಾ ಭಟ್ ನಡುಮನೆ, bಜಿಟಂಕ್ ಪಂಚಾಯಿತಿ ಸದಸ್ಯೆ ನಳಿನಿ ಕೃಷ್ಣ ಮಲ್ಲಮೂಲೆ, ವಾರ್ಡು ಸದಸ್ಯ ಹರೀಶ ಗೋಸಾಡ, ಶಾಲಾ ಪ್ರಾಂಶುಪಾಲ ಸತೀಶ್ ವೈ, ಮುಖ್ಯೋಪಾಧ್ಯಾಯ ಗಿರೀಶ್ ಎನ್. ಶುಭಹಾರೈಸಿದರು. ಕಾರ್ಯದರ್ಶಿ ಶರತ್ ಕುಮಾರ್ ಆರ್. ಸ್ವಾಗತಿಸಿ, ಸದಸ್ಯ ರಾಧಾಮಾಧವ ವಂದಿಸಿದರು. ಶ್ಯಾಮಲಾ ಕುಮಾರಿ ಕೆ. ನಿರೂಪಿಸಿದರು. ಬೆಳಗ್ಗೆ ಧ್ವಜಾರೋಹಣಗೈಯಲಾಯಿತು. ನಂತರ ನಡೆದ ಸಂಘಟನಾ ಚರ್ಚೆ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷ ರಾಧಾಕೃಷ್ಣ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೋಶಾಧಿಕಾರಿ ಮಹಾಬಲ ಭಟ್ ಮಾರ್ಗದರ್ಶನ ನೀಡಿದರು. ದಕ್ಷಿಣ ವಲಯ ಕಾರ್ಯದರ್ಶಿ ಪ್ರಭಾಕರನ್ ನಾಯರ್ ಮುಖ್ಯ ಭಾಷಣ ಮಾಡಿದರು. ರಾಜ್ಯ ಸಮಿತಿ ಸದಸ್ಯ ಕುಞಂಬು ವಿ.ಕೆ., ಶುಭಾಶಂಸನೆಗೈದರು. ಉಪಜಿಲ್ಲಾ ಕೋಶಾಧಿಕಾರಿ ಕವಿತಾ ಎಸ್. ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಗೋವಿಂದ ರಾಜ್ ಕೆ., ಸ್ವಾಗತಿಸಿ, ಚಂದ್ರಶೇಖರ ಎ.ಎನ್. ವಂದಿಸಿದರು.