HEALTH TIPS

ರಾಜ್ಯದಲ್ಲಿ ಬಿಜೆಪಿಯ ಬೆಳವಣಿಗೆ ನಿಯಂತ್ರಿಸಲು ಸಿಪಿಎಂ ಹೊಸ ಕಾರ್ಯತಂತ್ರದೊಂದಿಗೆ-ದೇವಾಲಯಗಳಲ್ಲೂ ಕಾಣಿಸಿಕೊಳ್ಳಲಿದ್ದಾರೆ ಕಾಮ್ರೇಡರುಗಳು!

               ತಿರುವನಂತಪುರ: ರಾಜ್ಯದಲ್ಲಿ ಬಿಜೆಪಿಯ ಬೆಳವಣಿಗೆಯನ್ನು ತಡೆಯಲು ದೇವಾಲಯಗಳನ್ನು ಹಿಡಿತದಲ್ಲಿಡಲು ಸಿಪಿಎಂ ನಿರ್ಧರಿಸಿದೆ ಎಂದು ತಿಳಿದುಬಂದಿದೆ.ದೇವಾಲಯಗಳ ಆಡಳಿತ ಸಮಿತಿಗಳಲ್ಲಿ ಆರ್.ಎಸ್.ಎಸ್. ಅಲ್ಲದ, ಸಿಪಿಎಂ ಚಿಂತನೆಗಳಿರುವವರನ್ನು ಸೇರಿಸುವ ನಿಟ್ಟಿನಲ್ಲಿ ಸಿಪಿಎಂ ಚಿಂತನೆಯಲ್ಲಿದೆ ಎನ್ನಲಾಗಿದೆ.  ಸಿಪಿಎಂ ಈ ಹಿಂದೆ ಅಂತಹ ನಿರ್ಧಾರ ತೆಗೆದುಕೊಂಡಿದ್ದರೂ, ಅದನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಸಾಧ್ಯವಿಲ್ಲ ಎಂದು ಅನೇಕ ನಾಯಕರು ಅಭಿಪ್ರಾಯಪಟ್ಟಿದ್ದರು. 

         ಸ್ಥಳೀಯ ಸಂಸ್ಥೆಗಳ ಚುನಾವಣೆಯ ಬಳಿಕ ಕೇರಳದಲ್ಲಿ ಬಿಜೆಪಿ ಬಲಗೊಳ್ಳುತ್ತಿದೆ ಮತ್ತು ಪಕ್ಷವು ಮತ ಬ್ಯಾಂಕ್ ಹೊಂದಲು ಸಮರ್ಥವಾಗಿದೆ ಎಂದು ಸಿಪಿಎಂ ಕಾರ್ಯಕರ್ತರು ಸ್ವತಃ ಸ್ಪಷ್ಟಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಪಿಎಂ ದೇವರ ಹಿಂದೆ ಬಿದ್ದಂತಿದೆ. 

        ಸಿಪಿಎಂನ ಸಾಂಪ್ರದಾಯಿಕ ಭದ್ರಕೋಟೆಗಳಲ್ಲಿ ಇದೀಗ ಕಂಡುಬರುತ್ತಿರುವ ಕೆಲವು ಬಿಜೆಪಿ ಮನಸ್ಥಿತಿಯನ್ನು ತಡೆಯಲು ಪ್ರಯತ್ನಿಸಬೇಕು ಎಂದು ಸಿಪಿಎಂ ಆಲೋಚಿಸಿದೆ.  ಕೊಲ್ಲಂನ ಪೂರ್ವ ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು ತಿರುವನಂತಪುರಂನ ಪಶ್ಚಿಮ ಕ್ಷೇತ್ರಗಳಲ್ಲಿ ಬಿಜೆಪಿಯ ಪ್ರಗತಿಯ ಹಿಂದೆ ಕೋಮು ಅಂಶಗಳಿವೆ ಎಂದು ಪಕ್ಷ ನಂಬುತ್ತಿದೆ.

        ಚುನಾವಣೆಯ ಸಂದರ್ಭ ಬಿಜೆಪಿಯು ಧಾರ್ಮಿಕ ಮಾರ್ಗಗಳ ಮೂಲಕ ಭಕ್ತರೊಂದಿಗಿನ ತನ್ನ ರಾಜಕೀಯ ಸಂಬಂಧವನ್ನು ಬಲಪಡಿಸುತ್ತಿರುವುದನ್ನು ತಡೆಹಿಡಿಯಲು ಪಕ್ಷಕ್ಕೆ ಕೆಲವು ಸೂಚನೆಗಳು ಬಂದಿದ್ದು, ಇದಕ್ಕಾಗಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ದೇವಾಲಯಗಳಲ್ಲಿ ಸಕ್ರಿಯರಾಗಲು ಸೂಚಿಸಲಾಗುತ್ತಿದೆ ಎನ್ನಲಾಗಿದೆ. ಅವರು ದೇವಾಲಯದ ಆಡಳಿತ ಮಂಡಳಿಗಳ ಸದಸ್ಯರಾಗಬೇಕು ಎಂದು ಪಕ್ಷ ಸೂಚಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries