ಕಲ್ಪೆಟ್ಟ: ಮಾವೋವಾದಿ ನಾಯಕಿ ಶ್ರೀಮತಿಯನ್ನು ವಯನಾಡ್ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದೆ. ಆಕೆಯನ್ನು ನಿನ್ನೆ ಬಂಧಿಸಲಾಯಿತು. ನ್ಯಾಯಾಲಯದ ವಿಶೇಷ ಅನುಮತಿಯೊಂದಿಗೆ ಆಕೆಯನ್ನು ಕೊಯಮತ್ತೂರಿನಿಂದ ಫೆ.1 ರವರೆಗೆ ವಯನಾಡ್ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದೆ.
ಕಲ್ಪೆಟ್ಟ ಡಿವೈಎಸ್ಪಿ ದಾಖಲಿಸಿರುವ ಎರಡು ಪ್ರಕರಣಗಳು ಹಾಗೂ ಮಾನಂದವಾಡಿ ಡಿವ್ಯೆಎಸ್ಪಿ ದಾಖಲಿಸಿರುವ ಎರಡು ಪ್ರಕರಣಗಳಲ್ಲಿ ಶ್ರೀಮತಿಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದು ವಯನಾಡ್ ಜಿಲ್ಲಾ ಪೊಲೀಸ್ ಮುಖ್ಯಸ್ಥೆ ಜಿ.ಪುಂಗಳಿನಿ ಹೇಳಿದರು. ಸದ್ಯ ಆಕೆಯನ್ನು ಮಾನಂದವಾಡಿ ಪೊಲೀಸ್ ಠಾಣೆಯಲ್ಲಿ ಕಸ್ಟಡಿಗೊಳಪಡಿಸಲಾಗಿದೆ. ಮಾನಂದವಾಡಿ ಠಾಣೆಗೆ ಬಿಗು ಭದ್ರತೆಯೊದಗಿಸಲಾಗಿದೆ.