ನವದೆಹಲಿ: ಹೊಸ ತಲೆಮಾರಿನ ಆಕಾಶ್ ಕ್ಷಿಪಣಿಯ ಚೊಚ್ಚಲ ಉಡಾವಣೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಸೋಮವಾರ ನಡೆಸಿದೆ. ಆಗಸ ಮಾರ್ಗದಲ್ಲಿ ಎದುರಾಗಬಹುದಾದ ದಾಳಿಯನ್ನು ತಪ್ಪಿಸಲು ಸಮರ್ಥವಾಗಿರುವ ಆಕಾಶ್ ಕ್ಷಿಪಣಿಯನ್ನು ಭಾರತೀಯ ವಾಯು ಪಡೆಯ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ.
ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಆಕಾಶ್ ಕ್ಷಿಪಣಿಯ ಯಶಸ್ವಿ ಉಡಾವಣೆಗಾಗಿ ವಿಜ್ಞಾನಿಗಳ ತಂಡವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದ್ದಾರೆ.
ಒಡಿಶಾದಲ್ಲಿ ಡಿಆರ್‌ಡಿಒ, ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಹಾಗೂ ಭಾರತೀಯ ವಾಯು ಪಡೆಯ ಪ್ರತಿನಿಧಿಗಳು ಪರೀಕ್ಷಾರ್ಥ ಉಡಾವಣೆಯಲ್ಲಿ ಭಾಗಿಯಾಗಿದ್ದರು. ನಿಗದಿತ ಗುರಿಯನ್ನು ತಡೆಯುವುದರಲ್ಲಿ ಕ್ಷಿಪಣಿ ಯಶಸ್ವಿಯಾಗಿದೆ ಎಂದು ಡಿಆರ್‌ಡಿಒ ತಿಳಿಸಿದೆ.