ಕೊಚ್ಚಿ: ಫ್ಯಾಷನ್ ಗೋಲ್ಡ್ ಹೂಡಿಕೆ ವಂಚನೆ ಪ್ರಕರಣದಲ್ಲಿ ಬಂಧನದಲ್ಲಿರುವ ಮಂಜೇಶ್ವರ ಶಾಸಕ ಎಂ.ಸಿ.ಕಮರುದ್ದೀನ್ ಅವರನ್ನು ಸೋಮವಾರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪ್ರಕರಣ ಸಂಬಂಧ ಮೂರೂ ದೂರುಗಳಿಗೆ ಹೈಕೋರ್ಟ್ ಜಾಮೀನು ನೀಡಿತು.
ನ್ಯಾಯಾಲಯವು ಕಮರುದ್ದೀನ್ ಅವರ ಆರೋಗ್ಯ ಮತ್ತು ಇತರ ಪ್ರಕರಣಗಳಲ್ಲಿ ಅವರ ಪಾತ್ರವಿಲ್ಲವೆಂಬುದನ್ನು ಪರಿಗಣಿಸಿ ಜಾಮೀನು ನೀಡಿದೆ. ಪ್ರಕರಣದ ಅಂತಿಮ ತೀರ್ಪು ಬರುವವರೆಗೆ ದೂರು ನೀಡಲ್ಪಟ್ಟಿರುವ ಪೋಲೀಸ್ ಠಾಣಾ ವ್ಯಾಪ್ತಿಯೊಳಗೆ ಪ್ರವೇಶಿಸಬಾರದು ಎಂದು ನ್ಯಾಯಾಲಯ ತೀರ್ಪು ನೀಡಿದೆ.