ಬದಿಯಡ್ಕ: ಬದಿಯಡ್ಕದ ಪೆರಡಾಲ ನವಜೀವನ ಶಾಲೆಯಲ್ಲಿ ಕಲಿಯುತ್ತಿರುವ ತೀರ ಬಡಕುಟುಂಬಕ್ಕೆ ಸೇರಿದ ನೆಲ್ಲಿಕಟ್ಟೆ ಸಂಪತ್ತಿಲ ಕಾಲನಿಯಲ್ಲಿ ವಾಸಿಸುತ್ತಿರುವ ಕುಮಾರಿ ಕಾರ್ತಿಕಳ ತಂದೆ ಸುಬ್ರಹ್ಮಣ್ಯ ಎಂಬವರು ಇತ್ತೀಚೆಗೆ ಕ್ಯಾನ್ಸರ್ ಬಾಧಿಸಿ ಮೃತಪಟ್ಟಿದ್ದರು. ಈ ಬಗ್ಗೆ ಅವರ ಕುಟುಂಬವನ್ನು ಸಂತೈಸಿ ಶಾಲಾ ವಿದ್ಯಾರ್ಥಿ ಸಹಾಯ ನಿಧಿ ಮತ್ತು ಅಧ್ಯಾಪಕರು ಸಂಗ್ರಹಿಸಿದ ಮೊತ್ತವನ್ನು ಅವರ ಕುಟುಂಬಕ್ಕೆ ಗುರುವಾರ ಹಸ್ತಾಂತರಿಸಲಾಯಿತು.
ಅಧ್ಯಾಪಕರಾದ ಸುಬ್ರಹ್ಮಣ್ಯ ಭಟ್, ನಾರಾಯಣ ಮುರಿಯಂಕೂಡ್ಲು, ನಿರಂಜನ ರೈ ಪೆರಡಾಲ, ಪ್ರಭಾವತಿ ಟೀಚರ್, ರಾಜೇಶ್ ಮಾಸ್ತರ್ ಮೊದಲಾದವರು ಭೇಟಿ ನೀಡಿದ ತಂಡದಲ್ಲಿದ್ದರು.