ತ್ರಿಶೂರ್: ತೃಶೂರ್ ಯೋಗ ಇನ್ಸ್ಟಿಟ್ಯೂಟ್ ನ 102 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆಯೋಜಿಸಲಾದ ವರ್ಚುವಲ್ ಮೀಟ್‍ನಲ್ಲಿ ಕೇಂದ್ರ ಆಯುಷ್ ಸಚಿವ ಶ್ರೀಪಾದ್ ಎಸ್ಸೋ ನಾಯಕ್ ಅವರು ಯೋಗ ಸಂಸ್ಥೆ ಪ್ರಾರಂಭಿಸಿದ ಹೊಸ ಮೆಡಿಟೇಶನ್(ಧ್ಯಾನ) ಅಪ್ಲಿಕೇಶನ್ ನಿಸ್ಪಂದ ಆಪ್ ನ್ನು ನಿನ್ನೆ ಉದ್ಘಾಟಿಸಿದರು.
ನಿಸ್ಪಂದ ಆಪ್ ನ್ನು ಪರಿಚಯಿಸಿದ ಕೇಂದ್ರ ಆಯುಷ್ ಸಚಿವ ಶ್ರೀಪಾದ್ ಎಸ್ಸೋ ನಾಯಕ್ ಮಾತನಾಡಿ ಜಗತ್ತು ಸುಧೀರ್ಘ ಕಾಲದಿಂದ ತುದಿಗಾಲಲ್ಲಿ ನಿಂತು ಕಾಯುತ್ತಿರುವ ಮೆಡಿಟೇಶನ್ ಆಪ್ ಸಾಫಲ್ಯಗೊಂಡಿದ್ದು, ನಿಸ್ಪಂದ ಜಗತ್ತಿನಲ್ಲಿ ಕ್ರಾಂತಿಯುಂಟು ಮಾಡುತ್ತದೆ ಮತ್ತು 360 ಡಿಗ್ರಿ ಆರೋಗ್ಯಕ್ಕೆ ನಮ್ಮನ್ನು ಹತ್ತಿರ ತರುತ್ತದೆ ಎಂದು ಹೇಳಿದರು.
ಈ ವರ್ಷದ ಫೆಬ್ರವರಿಯಿಂದ ನಿಸ್ಪಂದ ಆಫ್ ಐಒಎಸ್ ಮತ್ತು ಆಂಡ್ರಾಯ್ಡ್ ವೆಬ್ ಪ್ಲಾಟ್‍ಫಾರ್ಮ್‍ಗಳಲ್ಲಿ ಲಭ್ಯವಿರುತ್ತದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯೋಗ ಸಂಸ್ಥೆಯ ನಿರ್ದೇಶಕ ಡಾ.ಹನ್ಸ ಜೆ ಯೋಗೇಂದ್ರ ವಂದಿಸಿದರು.