ಕಾಸರಗೋಡು: ಕಣ್ಣೂರು ವಿಶ್ವವಿದ್ಯಾಲಯದ ಕಾಸರಗೋಡು ಕ್ಯಾಂಪಸ್ ನಲ್ಲಿ ಆರೋಗ್ಯ ಕೇಂದ್ರವು ಜ. 29 ರಂದು ಬೆಳಿಗ್ಗೆ 10.30 ಉದ್ಘಾಟನೆ ಗೊಳ್ಳಲಿದೆ. ಆರೋಗ್ಯ ಕೇಂದ್ರದ ಸಂಪೂರ್ಣ ಪ್ರಾಯೋಜಕತ್ವವನ್ನು ರೋಟರಿ ಕ್ಲಬ್ ಕಾಸರಗೋಡು ವಹಿಸಿಕೊಂಡಿದೆ. ರೋಟರಿ ಜಿಲ್ಲಾ ಗವರ್ನರ್ ಹರಿಕೃಷ್ಣ ನಂಬ್ಯಾರ್ ಉದ್ಘಾಟಿಸಲಿದ್ದಾರೆ. ಕಾಸರಗೋಡು ಜಿಲ್ಲಾ ಆಸ್ಪತ್ರೆಯ ಮೆಡಿಕಲ್ ಅಧೀಕ್ಷಕ ಡಾ. ರಾಜಾರಾಮ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಾಜಿ ಸಹಾಯಕ ಗವರ್ನರ್ ರಾಧಾಕೃಷ್ಣನ್ ಹಾಗೂ ನಿಯೋಜಿತ ಸಹಾಯಕ ಗವರ್ನರ್ ದಿನಕರ್ ರೈ ಶುಭಾಶಂಸನೆ ಗೈಯ್ಯುವರು. ರೋಟರಿ ಕ್ಲಬ್ ಕಾಸರಗೋಡು ಇದರ ಅಧ್ಯಕ್ಷ ಡಾ. ಜನಾರ್ಧನ್ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡುವರು. ಕಣ್ಣೂರು ವಿಶ್ವವಿದ್ಯಾಲಯದ ಕಾಸರಗೋಡು ಕ್ಯಾಂಪಸ್ ನಿರ್ದೇಶಕ ಡಾ. ರಾಜೇಶ್ ಬೆಜ್ಜಂಗಳ ಅಧ್ಯಕ್ಷತೆ ವಹಿಸುವರು.