ನವದೆಹಲಿ: ದೆಹಲಿಯ ರಾಜ್‌ಪತ್‌ನಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯುತ್ತಿರುವಾಗಲೇ ದೆಹಲಿ ಪ್ರವೇಶಿಸಲು ಮುಂದಾದ ಸಾವಿರಾರು ರೈತರನ್ನು ನಿಯಂತ್ರಿಸಲು ಪೊಲೀಸರು ಅಶ್ರವಾಯು ಪ್ರಯೋಗಿಸಿದರು.
ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿಯ ಗಡಿಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿ ರುವ ಗಣರಾಜ್ಯೋತ್ಸವದ ದಿನದಂದು (ಮಂಗಳವಾರ) ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ತೀರ್ಮಾನಿಸಿದ್ದರು. ಕೆಲವೊಂದು ನಿರ್ಬಂಧಗಳ ಜತೆಗೆ, ರಾಜ್‌ಪತ್‌ನಲ್ಲಿ ಕಾರ್ಯಕ್ರಮಗಳು ಮಗಿದ ಮೇಲೆ, ರ‍್ಯಾಲಿ ನಡೆಸಲು ಪೊಲೀಸರು ಅನುಮತಿ ನೀಡಿದ್ದರು.
ಆದರೆ, ಕೆಲವು ರೈತರ ಗುಂಪುಗಳು ರಾಜ್‌ಪತ್‌ನಲ್ಲಿ ಕಾರ್ಯಕ್ರಮಗಳು ನಡೆಯುತ್ತಿರುವ ವೇಳೆಯಲ್ಲಿ ದೆಹಲಿಯಲ್ಲಿ ಕಾಲ್ನಡಿಗೆ ಮೂಲಕ ದೆಹಲಿ ಪ್ರವೇಶಕ್ಕೆ ಮುಂದಾದರು. ಇನ್ನಷ್ಟು ರೈತರು ಟ್ರ್ಯಾಕ್ಟರ್‌ಗಳ ಮೂಲಕ ದೆಹಲಿಯ ರಸ್ತೆಗಳಲ್ಲಿ ಸಂಚರಿಸಿದರು.
ಬ್ಯಾರಿಕೇಡ್‌ಗಳನ್ನು ಮುರಿದು ಪ್ರತಿಭಟನೆಗೆ ಮುಂದಾದ ರೈತರನ್ನು ಚದುರಿಸಲು ಪೊಲೀಸರು ಪ್ರತಿಭಟನಾ ನಿರತರ ಮೇಲೆ ರೈತರು ಅಶ್ರವಾಯು ಪ್ರಯೋಗಿಸಿದರು. ಪೊಲೀಸರ ಎಲ್ಲ ಅಡೆತಡೆಗಳನ್ನು ದಾಟಿ ಪ್ರತಿಭಟನಾಕಾರರು ದೆಹಲಿ ಪ್ರವೇಶಿಸಿದರು.