HEALTH TIPS

ಮಗಳ ನೋಡಲು ಬಂದ ತಾಯಿಗೆ ಕಾದಿತ್ತು ಶಾಕ್​: ಮದ್ವೆಯಾದ ಕೆಲವೇ ದಿನಗಳಲ್ಲಿ ಅತ್ತೆ-ಸೊಸೆ ನಿಗೂಢ ಸಾವು!

         ತಿರುವನಂತಪುರಂ: ಅನುಮಾನಾಸ್ಪದ ರೀತಿಯಲ್ಲಿ ಸೊಸೆ ಸಾವಿಗೀಡಾದ ಕೆಲ ದಿನಗಳ ಬೆನ್ನಲ್ಲೇ ಅತ್ತೆಯ ಮೃತದೇಹ ಕೂಡ ಸಂಶಯಾಸ್ಪದ ರೀತಿಯಲ್ಲಿ ಮನೆಯ ಸಮೀಪದಲ್ಲಿ ಪತ್ತೆಯಾಗಿರುವ ಘಟನೆ ಕೇರಳದ ತಿರುವನಂತಪುರಂನ ಕಲ್ಲಂಬಳಂನಲ್ಲಿ ಮಂಗಳವಾರ ನಡೆದಿದೆ.

       ಅಥಿರಾ ಮೃತದೇಹ ಮನೆಯ ಬಾತ್​ರೂಮ್​ನಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದಾದ ಬೆನ್ನಲ್ಲೇ ಅಥಿರಾ ಅತ್ತೆ ಶ್ಯಾಮಲಾ ಕಾಣೆಯಾಗಿದ್ದರು. ಈ ಸಂಬಂಧ ಸೋಮವಾರ ದೂರು ಸಹ ದಾಖಲಾಗಿತ್ತು. ತೀವ್ರ ಶೋಧ ನಡೆಸಿದ ಪೊಲೀಸರಿಗೆ ಮನೆಯ ಪಕ್ಕದ ಕೋಳಿ ಫಾರಂ ಬಳಿ ಮೃತದೇಹ ಪತ್ತೆಯಾಗಿದೆ.

          ಕಲ್ಲಂಬಳಂ ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ಶ್ಯಾಮಲಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಅಥಿರಾ ಸಾವಿನಿಂದ ಒತ್ತಡಕ್ಕೆ ಒಳಗಾಗಿ ಆತುರದ ನಿರ್ಧಾರ ಕೈಗೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ. ಎಂಬಿಎ ಪದವೀಧರೆಯಾಗಿದ್ದ ಅಥಿರಾ ಮೃತದೇಹ ಜನವರಿ 15ರಂದು ಮನೆಯ ಬಾತ್​ರೂಮ್​ನಲ್ಲಿ ಪತ್ತೆಯಾಗಿತ್ತು. ಮದುವೆಯಾಗಿ ಕೇವಲ 28 ದಿನಗಳಾಗಿತ್ತು. ಶ್ಯಾಮಲಾ ಮಗ ಶರತ್​ನನ್ನು ಅಥಿರಾ ಮದುವೆಯಾಗಿದ್ದಳು.

       ಮಗಳನ್ನು ನೋಡಲೆಂದು ಮನೆಗೆ ಬಂದಿದ್ದ ಅಥಿರಾ ತಾಯಿ ಬಾತ್​ರೂಮ್​ನಲ್ಲಿ ಮಗಳ ಮೃತದೇಹ ನೋಡಿ ಆಘಾತಕ್ಕೊಳಗಾಗಿದ್ದರು. ಅಥಿರಾ ಮನೆಯ ಸಮೀಪವೇ ಶ್ಯಾಮಲಾ ಸಹ ವಾಸವಾಗಿದ್ದರು. ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಶರತ್​, ಮದುವೆಗೆಂದು ಮನೆಗೆ ಬಂದಿದ್ದ. ಅಥಿರಾ ಮೃತಪಟ್ಟ ದಿನದಂತೆ ಶರತ್​ ತನ್ನ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದ.

            ಅಥಿರಾ ಸಾವು ಅನುಮಾನಸ್ಪದವಾಗಿದೆ ಎಂದು ಆಕೆಯ ಕುಟುಂಬ ದೂರು ದಾಖಲಿಸಿದೆ. ಪೊಲೀಸ್​ ಮಹಾನಿರ್ದೇಶಕರು ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ನೀಡಿ ವಿಶೇಷ ತನಿಖೆ ಕೋರಿದ್ದಾರೆ. ಆದರೆ, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಆತ್ಮಹತ್ಯೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಆದರೆ, ಅಥಿರಾ ಕುಟುಂಬ ಇದನ್ನು ಅಲ್ಲಗೆಳೆದಿದೆ. ಅಥಿರಾಗೆ ರಕ್ತ ಕಂಡರೆ ಆಗುವುದಿಲ್ಲ. ಹೀಗಾಗಿ ತನ್ನ ಜೀವನವನ್ನು ತಾನೇ ಅಂತ್ಯಗೊಳಿಸುವ ಕೆಲಸಕ್ಕೆ ಮುಂದಾಗುವುದಿಲ್ಲ ಎಂದು ಹೇಳಿದ್ದಾರೆ.

       ಜಾಲತಾಣದಲ್ಲಿಯೂ ಸಹ ಅಥಿರಾ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಲಾಗಿದೆ. ಅಥಿರಾ ಸಾವಿನ ಬಳಿಕ ಶರತ್​ ಕುಟುಂಬದ ಮೇಲೆ ಬಂದು ಆರೋಪಗಳಿಂದ ಶ್ಯಾಮಲಾ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಈವರೆಗೂ ಅಥಿರಾ ಸಾವಿಗೆ ನಿಖರ ಕಾರಣವೇನೆಂಬುದನ್ನು ಪೊಲೀಸರು ಪತ್ತೆಹಚ್ಚಿಲ್ಲ. ಕುಟುಂಬದಲ್ಲಿ ಅನೇಕ ಸಮಸ್ಯೆಗಳಿದ್ದರಿಂದ ಶ್ಯಾಮಲಾಗೆ ಅಥಿರಾ ಜತೆ ಒಳ್ಳೆಯ ಸಂಬಂಧ ಇರಲಿಲ್ಲ. ಅಲ್ಲದೆ, ಅಥಿರಾ ಮರಣದ ನಂತರ ಶರತ್ ಮೃತದೇಹವನ್ನು ನೋಡಲು ಅಥವಾ ಕುಟುಂಬವನ್ನು ಸಂಪರ್ಕಿಸಿಲ್ಲ ಎಂದು ಅಥಿರಾ ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಪ್ರಕರಣದ ತನಿಖೆ ಮುಂದುವರಿದಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries