ನವದೆಹಲಿ: ನ್ಯೂ ಅಟೇಲಿ-ನ್ಯೂ ಕಿಶನ್ ಘರ್ ನಡುವೆ ಸಾಗುವ ವಿಶ್ವದ ಮೊಟ್ಟ ಮೊದಲ ವಿದ್ಯುತ್ ಚಾಲಿತ ಡಬಲ್-ಸ್ಟ್ಯಾಕ್ 1.5-ಕಿ.ಮೀ ಉದ್ದದ ಕಂಟೇನರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಅಲ್ಲದೆ ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್‌ನ 306 ಕಿ.ಮೀ ರೇವಾರಿ-ಮದಾರ್ ವಿಭಾಗವನ್ನು ಪ್ರಧಾನಿ ಉದ್ಘಾಟಿಸಿದರು
ಪೂರ್ವ ಮತ್ತು ಪಶ್ಚಿಮ ರಿಸರ್ವ್ ಸರಕು ಕಾರಿಡಾರ್‌ಗಳು ಭಾರತದ ಪಾಲಿಗೆ ಬೆಳವಣಿಗೆಯ ದಿಕ್ಕನ್ನು ಬದಲಿಸಬಲ್ಲದ್ದಾಗಿವೆ, ಇದು ದೇಶದ ವಿವಿಧ ಭಾಗಗಳಲ್ಲಿ ಹೊಸ ಅಭಿವೃದ್ಧಿ ಕೇಂದ್ರಗಳ ರಚನೆಗೆ ಗೆ ಸಹಾಯ ಮಾಡುತ್ತದೆ: ಪಿಎಂ ನರೇಂದ್ರ ಮೋದಿ ಹೇಳಿದರು.
ಭಾರತದ ಅಭಿವೃದ್ಧಿಯ ಪ್ರಯಾಣದುದ್ದಕ್ಕೂ, ಜಪಾನ್ ಮತ್ತು ಆ ರಾಷ್ಟ್ರದ ಜನತೆ ವಿಶ್ವಾಸಾರ್ಹ ಸ್ನೇಹಿತನಂತೆ ನಮ್ಮೊಂದಿಗೆ ನಿಂತಿದ್ದಾರೆ. ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ನಿರ್ಮಾಣದಲ್ಲಿ, ಜಪಾನ್ ನಮಗೆ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡಿತು. ನಾನು ಜಪಾನ್ ಮತ್ತು ಅದರ ಜನರಿಗೆ ಧನ್ಯವಾದ ಹೇಳುತ್ತೇನೆ ಎಂದು ಪ್ರಧಾನಿ ಹೇಳಿದರು.
ಇದೇ ವೇಳೆ ಭಾರತದಲ್ಲಿ ತಯಾರಾದ ಎರಡು ಕೋವಿಡ್ ಲಸಿಕೆಗಳು ಭಾರತದ ಜನರಲ್ಲಿ ಹೊಸ ವಿಶ್ವಾಸವನ್ನು ಮೂಡಿಸಿವೆ: ಎಂದರು.